SHARE

ಬೆಳಗಾವಿ: ಮನೆಮುರಿಯುವ ದುರ್ಬುದ್ದಿಯಿಂದ ರಾಜ್ಯದ ಜನರನ್ನು ಬೆಚ್ಚಿಸಿದ್ದ ಮಂತ್ರತಂತ್ರವಾದಿ ಶಿವಾನಂದ ವಾಲಿ ಎಂಬಾತ ಸುಮಾರು ₹5 ರಿಂದ 6 ಕೋಟಿಗೂ ಹೆಚ್ಚು ಸ್ಟಾರ್ ಕೆ.ಕಲ್ಯಾಣ ಅವರ ಆಸ್ತಿ ಕಬಳಿಕೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ಪೊಲೀಸರಿಗೆ ಗೊತ್ತಾಗಿದೆ. ಸೋಮವಾರ ಮಾಳಮಾರುತಿ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಪಿ ವಿಕ್ರಂ ಅಮಟೆ ಅವರು ಸಾಹಿತಿ ಕೆ.ಕಲ್ಯಾಣ ದಾಂಪತ್ಯದ ನಡುವಿನ ವಿರಸ ಪ್ರಕರಣಕ್ಕೆ ಸಂಬಂಧಿಸಿ ಮಾಳಮಾರುತಿ ಠಾಣೆಯಲ್ಲಿ ಮೋಸ ಮತ್ತು ಅಪಹರಣ ದೂರಿನ ತನಿಖೆ ಭಾಗವಾಗಿ ಮಾಹಿತಿ ನೀಡಿದರು.

ಮಾಳಮಾರುತಿ ಠಾಣೆ ಪೊಲೀಸರ ನೇತೃತ್ವದಲ್ಲಿ ತನಿಖೆ ಕೈಗೊಂಡು ಕವಿ ಸಾಹಿತಿ ಕೆ. ಕಲ್ಯಾಣ ಅವರ ಪತ್ನಿ ಹಾಗೂ ಅವರ ಕುಟುಂಬ ವರ್ಗವನ್ನು ರಕ್ಷಿಸಲಾಗಿದೆ ಎಂದರು. ಮಂತ್ರವಾದಿ ಶಿವಾನಂದ ವಾಲಿಯನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಕೆ. ಕಲ್ಯಾಣ ಅವರ ಕುಟುಂಬವನ್ನು ಇಡಿಯಾಗಿ ವಂಚಿಸಿದ ಬಗ್ಗೆ ತನಿಖೆಯಲ್ಲಿ ಬಾಯಿ ಬಿಟ್ಟಿದ್ದಾನೆ ಎಂದರು. ಮಾಳಮಾರುತಿ ಠಾಣೆ ಪೊಲೀಸರು ಆತನ ವಶದಲ್ಲಿದ್ದ 9 ಟ್ಯಾಕ್ಸಿ, 6ಕೆಜಿ ಬೆಳ್ಳಿ, ಬಂಗಾರದ ಒಡವೆಗಳು ಸೇರಿ ಧಾರವಾಡ, ಬೆಂಗಳೂರು, ಬೆಳಗಾವಿ, ಹುಬ್ಬಳಿ ಇತರ ನಗರಗಳಲ್ಲಿನ ಆಸ್ತಿಪಾಸ್ತಿ ಶಿವಾನಂದ ವಾಲಿಯೇ ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಮಾಟ ಮಂತ್ರದ ಹೆಸರಿನಲ್ಲಿ ಪತಿಪತ್ನಿಯರ ನಡುವೆ ವಿರಸವಿಟ್ಟು ಸಾಕಷ್ಟು ಹಣ ಸೆಳೆದ ಆರೋಪ ಮಂತ್ರವಾದಿಯ ಮೇಲಿದೆ. ಗೀತ ಸಾಹಿತಿ ಕೆ. ಕಲ್ಯಾಣ ಅವರ ಮನೆಕೆಲಸದಾಕೆ ಗಂಗಾ ಕುಲಕರ್ಣಿ ಮೂಲಕ ಕೆ. ಕಲ್ಯಾಣ ಕುಟುಂಬ ವಾಲಿ ಮೋಸತನಕ್ಕೆ ಬಲಿಯಾಗಿತ್ತು.