SHARE

ವರದಿ: ಕಾಶೀಮ ಹಟ್ಟಿಹೊಳಿ, ಖಾನಾಪುರ
ಖಾನಾಪುರ: ಬೆಳಗಾವಿ ಜಿಲ್ಲೆ, ಚನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದ ಹತ್ತಿರ ಇರುವ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಾಸೀರ ಬಾಗವಾನ್ ನೇತೃತ್ವದ ಪೆನಲ್ ಪ್ರಚಂಡ ಬಹುಮತದೊಂದಿಗೆ ವಿಜಯ ಪತಾಕೆ ಹಾರಿಸಿದ್ದು, ಇಲ್ಲಿ ನಡೆದ ಚುನಾವಣೆಯಲ್ಲಿ ೧೫ ಸ್ಥಾನಕ್ಕೆ, ೧೫ದು ಸ್ಥಾನಗಳು ನಾಸೀರ ಬಾಗವಾನ್ ಪೆನಲ್ ಪಾಲಾಗಿವೆ. ಬುಧುವಾರದಂದು ಮದ್ಯರಾತ್ರಿ ೨ ಗಂಟೆಗೆ ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆಯ ಮತ ಎಣಿಕೆ ಮುಕ್ತಾಯವಾಗಿದ್ದು, ನಾಸೀರ ಬಾಗವಾನ್ ಪೆನಲ್ ಎಲ್ಲಾ ಅಭ್ಯರ್ಥಿಗಳು ಭರ್ಜರಿ ಗೆಲವು ಸಾಧಿಸಿ ವಿಜಯದ ಮಾಲೆ ಕೊರಳಿಗೆ ಹಾಕಿಕೊಂಡಿದ್ದು, ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಅವರ ಸುಪುತ್ರ ಪ್ರಕಾಶಗೌಡ ಪಾಟೀಲ ಅವರ ನೇತೃತ್ವದ ಪೆನಲ್ ಒಂದು ಸ್ಥಾನ ಗೆಲ್ಲದೆ ಹಿನಾಯ ಸೋಲು ಅನುಭವಿಸಿದೆ. ಬುಧುವಾರ ಬೆಳಿಗ್ಗೆ ೯ ಗಂಟೆಯಿಂದ ಶುರುವಾದ ಮತದಾನ ಸಾಯಂಕಾಲ ೪ ಗಂಟೆ ವರೆಗೆ ಮತದಾನದ ಪ್ರಕ್ರಿಯೆ ನಡೆದಿದೆ. ಅದೇ ದಿನ ಸಂಜೆ 7 ಗಂಟೆಗೆ ಮತ ಎಣಿಕೆಯ ಕಾರ್ಯ ಆರಂಭವಾಗಿದ್ದು, ಆರಂಭದಲ್ಲಿ ನಾಸೀರ ಬಾಗವಾನ್ ಗುಂಪಿನ ಮಹಿಳಾ ಅಭ್ಯರ್ಥಿಗಳು ವಿಜಯದ ಪತಾಕೆ ಹಾರಿಸಿ, ನಂತರ ಅ ವರ್ಗ, ಬ ವರ್ಗ ಮತ್ತು ಎಸ್ ಸಿ ವರ್ಗ, ಎಸ್ ಟಿ ವರ್ಗದ ಅಭ್ಯರ್ಥಿಗಳು ಗೆಲವು ತಮ್ಮದಾಗಿಸಿಕೊಂಡು *ನಾಸೀರ್ ಬಾಗವಾನ್* ಅವರ ಗುಂಪಿಗೆ ಭರ್ಜರಿ ಜಯ ದೊರಕಿಸಿಕೊಟ್ಟರು. ನಂತರ ನಡೆದ ಸಾಮಾನ್ಯ ಅಭ್ಯರ್ಥಿಗಳ ಮತ ಎಣಿಕೆಯಲ್ಲಿ ಪ್ರಕಾಶಗೌಡ ಪಾಟೀಲ ನೇತೃತ್ವದ ಪೆನಲ್‌ ಅಭ್ಯರ್ಥಿಗಳು ಪೈಪೋಟಿ ನೀಡಲು ಹರಸಾಹಸ ಪಟ್ಟರು ಸಹ ಯಾವೊಬ್ಬ ಅಭ್ಯರ್ಥಿಗೆ ಗೆಲವು ಸಾಧಿಸಲು ಆಗದೆ, ಮತ ಏಣಿಕೆ ಕಾರ್ಯ ಮುಕ್ತಾಯದ ಮುಂಚೆಯೇ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ತಮ್ಮ ತಮ್ಮ ಮನೆಗೆ ತೆರಳಿದರು. ತದನಂತರ ಮದ್ಯರಾತ್ರಿ ಎರಡು 2.30 ಕ್ಕೆ ಮತ ಎಣಿಕೆಯ ಕಾರ್ಯ ಮುಗಿದಾಗ ನಾಸೀರ ಬಾಗವಾನ ಅವರ ಗುಂಪಿನ ಎಲ್ಲ ಹದಿನೈದು ಅಭ್ಯರ್ಥಿಗಳು ಗೆಲುವಿನ ನಗೆ ಬಿರಿ ಪರಸ್ಪರ ಗುಲಾಲು ಎರಚಿ ಪಟಾಕ್ಷಿ ಹಚ್ಚಿ ಕುಣಿದು ಕುಪ್ಪಳಿಸಿದರು. ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 2452 ಮತದಾರರಿದ್ದು, ಇದರಲ್ಲಿ 2049 ಮತದಾರರು ಮತವನ್ನು ಚಲಾಯಿಸಿದ್ದರು.
ಗೆಲವು ಸಾಧಿಸಿದ ನಾಸೀರ ಬಾಗವಾನ್ ಅವರ ಗುಂಪಿನ ಅಭ್ಯರ್ಥಿಗಳ ವಿವರ:
1) ನಾಶೀರುದ್ದೀನ ಬಾಗವಾನ-ಗಂದಿಗವಾಡ
2) ಅಶೋಕ ಯಮಕನಮರಡಿ -ಗಂದಿಗವಾಡ
3) ಅಶೋಕ ಬೆಂಡಿಗೇರಿ -ಚಿಕ್ಕ ಮುನವಳ್ಳಿ
4) ಮಂಜುನಾಥ ಪಾಟೀಲ- ದಾಸ್ತಿಕೊಪ್ಪ
5) ಲಕ್ಷ್ಮಣ ಎಮ್ಮಿ – ಮಲ್ಲಾಪುರ ಕೆ ಎ
6) ಸಿದ್ದಪ್ಪ ದೊರೆಪ್ಪನವರ- ಹುಲಿಕಟ್ಟಿ
7) ಭರತೇಶ್ ಶೇಬಣ್ಣವರ- ದೇವರಶಿಗಿಹಳ್ಳಿ
8) ಬಸವರಾಜ ಬೆಂಡಿಗೇರಿ- ಎಂಕೆ ಹುಬ್ಬಳ್ಳಿ
9) ಜ್ಯೋತಿಬಾ ಹೈಬತ್ತಿ- ಕಾದರವಳ್ಳಿ
10) ಬಸವರಾಜ ಪುಂಡಿ- ಇಟಗಿ
11) ಶಂಕರಗೌಡ ಪಾಟೀಲ – ಬೈಲೂರು
12) ಸಂಜೀವ್ ಹುಬಳ್ಯೆಪ್ಪನವರ- ಎಂ.ಕೆ ಹುಬ್ಬಳ್ಳಿ
13) ಸಾವಂತ ಕಿರಬನವರ- ತಿಗಡೊಳ್ಳಿ
14) ಮೀನಾಕ್ಷಿ ನೆಲಗಳಿ- ಬೋಗೂರ
15) ಲಕ್ಷ್ಮಿ ಅರಳಿಕಟ್ಟಿ -ಹಿರೇಬಾಗೇವಾಡಿ