SHARE

ಬೆಳಗಾವಿ(ಸವದತ್ತಿ): ಇಂದು ಸಂಜೆ ಮತ್ತೆ ಗುಡುಗಿದ ಅಕಾಲಿಕ ಭಾರಿ ಮಳೆಯಿಂದ ಸಿಡಿಲು ಬಡಿದು ಸವದತ್ತಿ ನವಿಲುತೀರ್ಥ ಡ್ಯಾಂನ ಹತ್ತಿರ ಕುರಿಗಾರರ ಸುಮಾರು 45ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. ಅಲ್ಲದೇ ತಾಲೂಕಿನ ಇಬ್ಬರು ಮಹಿಳೆಯರು ಸಿಡಿಲಿಗೆ ಬಲಿಯಾಗಿದ್ದು, ಒಬ್ಬಳು ತೀವ್ರ ಗಾಯಗೊಂಡಿದ್ದಾಳೆ. ಸ್ಥಳಕ್ಕೆ ಶಾಸಕ ಹಾಗೂ ಉಪಸಭಾಪತಿ ಆನಂದ ಮಾಮನಿ ಭೇಟಿ ನೀಡಿ ತಾಲೂಕಾ ದಂಡಾಧಿಕಾರಿಗಳಿಗೆ, ಸರ್ಕಾರದಿಂದ ಕುರಿಗಾರರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು. ಮೃತರನ್ನು ಚಿಕ್ಕ ಉಳ್ಳಿಗೇರಿಯ ಭಾಗವ್ವ ಕಡಕೋಳ (50) ಯಲ್ಲವ್ವಾ ಇಂಚಲ (30) ಎಂದು ಗುರುತಿಸಲಾಗಿದೆ. ರೇಣವ್ವ ಇನಾಮಹೊಂಗಲ ಎಂಬುವವಳನ್ನು ಗ್ರಾಮದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.