SHARE

ಬೆಳಗಾವಿ: ನಗರದ ಭಾಗ್ಯನಗರದ 6 ಮತ್ತು 7 ನೇ ಕ್ರಾಸ್ ಪ್ರದೇಶದಲ್ಲಿ ಮುಳ್ಳುಹಂದಿ(Porcupine) ಸೆರೆಹಿಡಿಯಲಾಗಿದ್ದು ಖಾನಾಪುರ ಕಾಡಿನಲ್ಲಿ ಮಧ್ಯಾಹ್ನ ಬಿಡಲಾಯಿತು. ಮುಳ್ಳುಹಂದಿ ಸಂಚರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ಬೆಳಗಾವಿ ವಲಯ ಅರಣ್ಯಾಧಿಕಾರಿಗಳು ಬಲೆ ಕೆಡವಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಳ್ಳುಹಂದಿಯನ್ನು ಯಶಸ್ವಿಯಾಗಿ ಹಿಡಿಯಲಾಗಿದ್ದು ಕಾಡಿಗೆ ಬಿಡಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ. ಬಿ. ಕುಸನಾಳ ತಿಳಿಸಿದ್ದಾರೆ. RFO ಆರ್. ಎಚ್. ಡೊಂಬರಗಿ, RFO ಶಿವಾನಂದ ಮಗದುಮ, ಡಿಆರ್ ಎಫ್ ಓ ವಿನಯ ಗೌಡರ, ಮಿಹಮ್ನದ ಹಾಗೂ ಸಿಬ್ಬಂಧಿ ಕಾರ್ಯಾಚರಣೆ ನಡೆಸಿದರು.