SHARE

ಬೆಳಗಾವಿ: ಬೈಕ್ ಕದಿಯುತ್ತಿದ್ದ ನಾಲ್ವರು ಕಳ್ಳರನ್ನು ಮಾರ್ಕೇಟ್ ಠಾಣೆ ಪೊಲೀಸರು ಬಂಧಿಸಿದ್ದು ಎಂಟು ಬೈಕ್ ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ನಗರದ ಹಲವು ಭಾಗಗಳಲ್ಲಿ ಜನರ ಬೈಕ್ ಕದಿಯುತ್ತಿದ್ದ ಖದೀಮರು ಪೊಲೀಸರ ಖೆಡ್ಡಾಗೆ ಬಿದ್ದಿದ್ದಾರೆ. ಪೊಲೀಸ್ ಆಯುಕ್ತ ಟಿ. ತ್ಯಾಗರಾಜನ್, ಡಿಸಿಪಿ ವಿಕ್ರಮ ಅಮಟೆ, ಡಿಸಿಪಿ ಕ್ರೈಂ ನೀಲಗಾರ ಹಾಗೂ ಮಾರ್ಕೇಟ್ ಉಪವಿಭಾಗ ಎಸಿಪಿ ಎಸ್. ಆರ್. ಕಟ್ಟಿಮನಿ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಸಂಗಮೇಶ ಸಿ. ಶಿವಯೋಗಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.

ಆರೋಪಿತರಾದ ಯಳ್ಳೂರ ರಸ್ತೆಯ ಅಕ್ಷಯ ಅಶೋಕ ತಾಂದಳೆ(೨೨), ಉದ್ಯಮಭಾಗದ ಪ್ರಸಾದ ಅಶೋಕ ಪಾಟೀಲ(೨೪), ಚವಾಟ ಗಲ್ಲಿಯ ಓಂಕಾರ ಶ್ರೀಕಾಂತ ಇಂಗಳೆ(೨೩), ಕೋಳಿಗಲ್ಲಿಯ ಶಭಂ ರಾಜು ವಾಡಕರ(೨೨) ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ₹2.95 ಲಕ್ಷ ಮೌಲ್ಯದ ಎಂಟು ಬೈಕಗಳನ್ನು ವಶಕ್ಕೆ ಪಡೆಯಲಾಗಿದೆ. ಪಿಎಸ್ಐ ಎಂ. ಎಸ್. ವಠಾರೆ, ವಿಠ್ಠಲ ಹಾವನ್ನವರ, ಸಿಬ್ಬಂಧಿಗಳಾದ ಎಲ್. ಎಸ್. ಕಡೋಲಕರ, ಎನ್. ವೈ. ಮೈಲಾಕೆ, ಶಿವಪ್ಪ ತೇಲಿ, ವಿಶ್ವನಾಥ ಮಾಳಗಿ, ಆಸೀರ ಜಮಾದಾರ, ಮಾರುತಿ ಚವಡಿ, ಸಂಜು ಪಾತ್ರೋಟ ಇತರರು ಕಾರ್ಯಾಚರಣೆ ನಡೆಸಿದರು.