SHARE

ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2A ಮೀಸಲಾತಿಗಾಗಿ ಆಗ್ರಹಿಸಿ ಕೂಡಲಸಂಗಮ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೆಳಗಾವಿ ಸುವರ್ಣ ವಿಧಾನ ಸೌಧದ ಎದುರು ಉಪವಾಸ ಸತ್ಯಾಗ್ರಹ ಇಂದು ಪ್ರಾರಂಭವಾಯಿತು. ನಗರದ ಅಂಬೇಡ್ಕರ್ ಉದ್ಯಾನದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪನೆ ಮಾಡುವ ಮೂಲಕ ಹೋರಾಟ ಆರಂಭಿಸಿದ ಹೋರಾಟಗಾರರು ವಿವಿಧ ಹಕ್ಕೊತ್ತಾಯ ಸರಕಾರದ ಮುಂದೆ ಇಟ್ಟಿದ್ದಾರೆ. ಪಂಚಸೇನೆ ಕೂಡಲಸಂಗಮದ ರಾಷ್ಟ್ರಾಧ್ಯಕ್ಷರಾದ ಮಹಾಂತೇಶ ಹಳ್ಳೂರ ಮಾತನಾಡಿ ಪಂಚಮಸಾಲಿ ಸಮಾಜದ ಬಂಧುಗಳು ಕಳೆದ 25 ವರ್ಷಗಳಿಂದ 2ಎ ಮೀಸಲಾತಿಗಾಗಿ ಹಕ್ಕೊತ್ತಾಯ ಮಾಡುತ್ತ ಬಂದಿದ್ದು ಆದರೂ ಸಹಿತ ಎಲ್ಲ ಸರಕಾರಗಳ ದಿವ್ಯ ನಿರ್ಲಕ್ಷ ಧೋರಣೆಯನ್ನು ತಾಳುತ್ತ ಬಂದಿವೆ. ಈ ನಿಟ್ಟಿನಲ್ಲಿ ಎಲ್ಲ ಸರಕಾರಗಳ ಧೋರಣೆಯನ್ನು ಖಂಡಿಸಿ ಕೂಡಲಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಇಂದಿನಿಂದ ನಡೆಯುತ್ತಿದೆ.

ಕೃಷಿ ಪ್ರಧಾನ ಪಂಚಮಸಾಲಿ ಸಮಾಜಕ್ಕೆ ಶೈಕ್ಷಣಿಕವಾಗಿ ಮತ್ತು ಉದ್ಯೋಗಕ್ಕಾಗಿ 2ಎ ಮೀಸಲಾತಿಯನ್ನು ಪಡೆದರೆ ಮಾತ್ರ ಮುಂದಿನ ದಿನಮಾನಗಳಲ್ಲಿ ನಮ್ಮ ಸಮಾಜದ ಯುವ ಪೀಳಿಗೆಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸಮಾಜದ ಬಂಧುಗಳೆಲ್ಲ ಓಂದಾಗಿ ನಡೆಸುವ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ಭಾಗವಹಿಸಿದ್ದಾರೆ ಎಂದರು. ರಾಜ್ಯಾಧ್ಯಕ್ಷ ಡಾ. ಬಿ ಎಸ್ ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಮನಗಂಡಿ. ಮಹಾಂತೇಶ ಮದರಿ, ಮುತ್ತಣ್ಣ ಗಂಜಿಹಾಳ, ರವಿ ಗವಳಿ, ವಿಜಯ ಮಹಾಂತೇಶ ಮಲಗಿಹಾಳ, ಅಮರೇಶ ಬನ್ನಟ್ಟಿ, ಡಾ. ಶಿವರಾಜ ಪಾಟೀಲ, ಬಸವರಾಜ ರೊಟ್ಟಿ ಇತರರು ಉಪಸ್ಥಿತರಿದ್ದರು.