SHARE

ಮೈಸೂರು:ಕಾಂಗ್ರೆಸ್ ನವರ ಸಹವಾಸ ಮಾಡಿ ನಾವಿಂದು ಸರ್ವನಾಶವಾಗಿದ್ದೇವೆ. ಸಿದ್ದರಾಮಯ್ಯ ಅವರ ಪ್ರೀ ಪ್ಲ್ಯಾನ್ ಟ್ರ್ಯಾಪ್ ನಲ್ಲಿ ಸಿಲುಕಿ ನಾನು ಅಧಿಕಾರ ಕಳೆದುಕೊಳ್ಳುವಂತಾಯ್ತು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ನವರ ಸಹವಾಸದಿಂದಲೇ ಜೆಡಿಎಸ್ ಶಕ್ತಿ ಕುಂದಿದೆ. ಬಿಜೆಪಿಯೊಂದಿಗೆ ಕೈಜೋಡಿಸಿದ್ದರೆ ನಾನು ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ. ಕಾಂಗ್ರೆಸ್ ಜೊತೆ ಕೈ ಜೋಡಿಸಿ ಇಂದು ಅಧಿಕಾರ ಕಳುದುಕೊಳ್ಳುವಂತಾಯ್ತು ಎಂದು ಹೇಳಿದರು.

2006-07ರಲ್ಲಿ ನಾನು ಒಂದು ಒಳ್ಳೆಯ ಅಭಿಪ್ರಾಯವಿಟ್ಟುಕೊಂಡಿದ್ದೆ. ರಾಜಕೀಯ ಹಸ್ತಾಂತರ ಗೊಂದಲದ ನಡುವೆಯೂ ನನ್ನ ಬಗ್ಗೆ ಒಳ್ಳೆ ಅಭಿಪ್ರಾಯವಿತ್ತು. ಆದರೆ ಕಾಂಗ್ರೆಸ್ ನವರ ಸಹವಾಸ ಮಾಡಿ, ದೇವೇಗೌಡರ ಮಾತು ಕೇಳಿ… ಅಂದರೆ ನಾನು ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡುತ್ತಿಲ್ಲ. ಅವರಿಗೆ ಅವರದ್ದೇ ಕಮಿಟ್ ಮೆಂಟ್ ಇತ್ತು. ಈ ವಯಸ್ಸಿನಲ್ಲಿ ಅವರ ಭಾವನೆಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ ಜೊತೆ ಕೈಜೋಡಿಸಲು ಒಪ್ಪಿಕೊಂಡೆ. ಆದರೆ ಸಿದ್ದರಾಮಯ್ಯ ಹಾಗೂ ಟೀಂ ನಮ್ಮನ್ನು ಎಮೋಷನಲ್ ಆಗಿ ಪ್ರಿ ಪ್ಲ್ಯಾನ್ ಮಾಡಿ ಟ್ರ್ಯಾಪ್ ಮಾಡಿತು. ನಮ್ಮ ವಿರುದ್ಧವೇ ಅಪಪ್ರಚಾರ ಮಾಡಿ ನಮ್ಮ ಸರ್ವನಾಶವಾಗುವಂತೆ ಮಾಡಿತು ಎಂದು ಕಿಡಿಕಾರಿದರು. ರಾಜ್ಯದಲ್ಲಿ ನಾವು ಮತ್ತೆ ಪಕ್ಷ ಸಂಘಟನೆ ಮಾಡುತ್ತೇವೆ. ನಾನು ಒಂದು ಒಳ್ಳೆಯ ಸಮಯಕ್ಕಾಗಿ ಯಾಕುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.