SHARE

ಬೆಳಗಾವಿ: ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳ ಕರೆಗೆ ನೀರಸ ಪ್ರತಕ್ರಿಯೆ ವ್ಯಕ್ತವಾಗಿದೆ. ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ.ಕರ್ನಾಟಕ ಬಂದ್ ಕರೆಗೆ ಬೆಳಗಾವಿಯ ಜನ ಬೆಂಬಲ ಕೊಡಲಿಲ್ಲ. ಬೆಳಗಾವಿಯಲ್ಲಿ ಎಂದಿನಂತೆ ಬಸ್ ಸಂಚಾರ ನಡೆದಿದೆ. ಮಾರ್ಕೆಟ್ ಶುರುವಾಗಿದೆ.ಅಟೋಗಳು ರಸ್ತೆಗಿಳಿದಿವೆ. ಅಂಗಡಿಗಳು ತೆರೆದಿವೆ, ಬೆಳಗಾವಿಯಲ್ಲಿ ಸಿಎಂ ಸೇರಿ ಹಲವು ಸಚಿವರ ವಾಸ್ತವ್ಯ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳಿಗೆ ಕೇವಲ ಪ್ರತಿಭಟನೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.