SHARE

ಬೆಳಗಾವಿ: ಗ್ರಾಮ ಸ್ವರಾಜ್ ಯೋಜನೆಯಡಿ ಗ್ರಾಮಗಳ ಅಭಿವೃದ್ಧಿ ಮಾಡುವುದು ಮತ್ತು, ಗೋಹತ್ತೆ ನಿಷೇಧ ಕಾಯ್ದೆ ಹಾಗೂ ಲವ್ ಜಿಹಾದ ಕಾಯ್ದೆಗಳನ್ನು ಜಾರಿಗೆ ತರುವ ಬಗ್ಗೆ ರಾಜ್ಯ ಕಾರ್ಯಕಾರಿಣಿ ನಿರ್ಣಯ ಕೈಗೊಂಡಿದೆ. ಇಂದು ರಾಜ್ಯ ಕಾರ್ಯಕಾರಿಣಿ ನಂತರ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು ಬೈ ಎಲೆಕ್ಷನ್ಗಾಗಿ ಪ್ರಭಾರಿಗಳ ನೇಮಕ, ಚುನಾವಣಾ ಸಮಿತಿ ಪಕ್ಷದಲ್ಲೇ ಮಾಡಲಾಗಿದೆ. ಶಿಸ್ತು ಸಮಿತಿಯಲ್ಲಿ ರಾಜ್ಯಾಧ್ಯಕ್ಷರಿಗೆ ಸೂಕ್ತ ನಿರ್ಣಯಗಳನ್ನು ಮಾಡಲು ಅಧಿಕಾರ ಕೊಡಲಾಗುತ್ತದೆ ಎಂದರು.

ಲವ್ ಜಿಹಾದ ಕಾಯ್ದೆ ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ ಇದು ಇಂದು ರಾಜ್ಯದಲ್ಲಿ ಗಂಭೀರ ಸಮಸ್ಯೆಯಾಗಿ ಹೊರಹೊಮ್ಮಿದೆ ಎಂದರು.
ಸುಳ್ಯದಲ್ಲಿ ಮೂರ್ನಾಲ್ಕು ಲವ್ ಜಿಹಾದ ಪ್ರಕರಣಗಳು ಪತ್ತೆ, ಪ್ರೀತಿ ಪ್ರೇಮದ ಹೆಸರಲ್ಲಿ ಅನ್ಯಾಯಗಳು ಹೆಚ್ಚಾಗಿವೆ. ಸರಕಾರ ತೀರ್ಮಾಣ ಮಾಡುತ್ತದೆ ಎಂದರು. ಸಚಿವ ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿ ಪತಮಾಧಿಕಾರ, ರಾಷ್ಟ್ರೀಯ ವರಿಷ್ಟರು ಮತ್ತು ಮುಖ್ಯಮಂತ್ರಿ ನಿರ್ಧರಿಸುತ್ತಾರೆ ಎಂದರು. ಪಕ್ಷ ಮತ್ತು ನಾಯಕತ್ವದ ವಿರುದ್ದ ಪಕ್ಷದ ನಾಯಕರು ಮತ್ತು ಪದಾಧಿಕಾರಿಗಳು ಮಾತನಾಡಿದಾಗ ಆಂತರಿಕವಾಗಿ ಕರೆದು ತಿಳಿವಳಿಕೆ ನೀಡಲಾಗಿದೆ.

ನೋವುಗಳ ತೋಡಿಕೆಗೂ ಪಕ್ಷದಲ್ಲಿ ಅವಕಾಶ ಇದೆ. ಎಲ್ಲರ ಭಾವನೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಮಾರ್ಮಿಕವಾಗಿ ಬಸನಗೌಡ ಪಾಟೀಲ ಯತ್ನಾಳ ಅವರ ಇತ್ತೀಚಿನ ನಡವಳಿಕೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಮಾರ್ಮಿಕವಾಗಿ ನುಡಿದರು. ಯಾವುದೇ ಶಾಸಕರು, ಸಂಸದರು ಇಲ್ಲವೇ ನಾಯಕರು ಇನ್ಮುಂದೆ ತಮಗೆ ತಿಳಿದಂತೆ ಹೇಳಿಕೆ ನೀಡದಂತೆ ಎಚ್ಚರಿಸಲಾಗಿದೆ ಎಂದರು. ಗಣೇಶ ಕಾರ್ನಿಕ್, ಅನಿಲ ಬೆನಕೆ, ಅಭಯ ಪಾಟೀಲ, ಸಂಜಯ ಪಾಟೀಲ ಇತರರು ಉಪಸ್ಥಿತರಿದ್ದರು.