SHARE

ಬೆಳಗಾವಿ: ಹೆಚ್ಚಿನ ಅಸಮತೋಲನ ಆಸ್ತಿಪಾಸ್ತಿ ಹೊಂದಿರುವ ಆರೋಪದ ಮೇಲೆ ನಾಲ್ಕು ಕಡೆಗೆ ದಾಳಿ ನಡೆಸಿದ ಎಸಿಬಿ ತಂಡಗಳು ಲೋಕೋಪಯೋಗಿ, ಬಂದರು & ಒಳನಾಡು ಜಲಸಾರಿಗೆ ಇಲಾಖೆ ಉಪವಿಭಾಗ-೧ ಅಭಿಯಂತನನ್ನು ವಿಚಾರಣೆಗೆ ಒಳಪಡಿಸಿವೆ.
ಮನೋಜ ಸುರೇಶ ಕವಳೇಕರ ಎಂಬ ಸರಕಾರಿ ನೌಕರನ ಕುಟುಂಬ ವಾಸಿಸುವ ಅಯೋಧ್ಯಾ ನಗರದ ನಿವಾಸ, ಈತನ ಸಹೋದರಿ ಜ್ಯೋತಿ ಕವಳೇಕರ ಮತ್ತು ಅವರ ಪತಿ ಶಿಕ್ಷಣಾಧಿಕಾರಿ ಎ. ಬಿ. ಪುಂಡಲೀಕ ವಾಸವಿರುವ ಅಯೋಧ್ಯಾ ನಗರದ ಇನ್ನೊಂದು ನಿವಾಸ, ಇನ್ನೊಬ್ಬ ಸಹೋದರಿ ರಾಜಶ್ರೀ ಕವಳೇಕರ ಅವರು ವಾಸವಿರುವ ಮಹಾದ್ವಾರ ರಸ್ತೆಯ ಮಲ್ಹಾರ ರೆಸಿಡೆನ್ಸಿ ನಿವಾಸ, ಸದರಿ ಅಧಿಕಾರಿ ಕಾರ್ಯನಿರ್ವಹಿಸುವ ಬೆಳಗಾವಿ ಕಚೇರಿ ಮತ್ತು ಈತನ ಸಹೋದರಿ ರಾಜಶ್ರೀ ಹೆಸರಿನಲ್ಲಿರುವ ಖಾನಾಪುರ ತಾಲೂಕಿನ ಸಂಗರಗಾಳಿ ಗ್ರಾಮದ ಫಾರ್ಮಹೌಸಗಳ ಮೇಲೆ ಎಸಿಬಿಯ ವಿವಿಧ ತಂಡಗಳು ದಾಳಿ ನಡೆಸಿ ಇಂದು ತಪಾಸಣೆ ನಡೆಸಿದವು. ಸದರಿ ಅಧಿಕಾರಿಯ ಆಸ್ತಿಪಾಸ್ತಿಗಳ ಮೂಲದ ಬಗ್ಗೆ ಮತ್ತು ದಾಖಲೆಗಳ ಪರಿಶೀಲನೆ ಮುಂದುವರೆದಿದೆ ಎಂದು ಎಸಿಬಿ ಎಸ್ಪಿ ತಿಳಿಸಿದ್ದಾರೆ.