ಬೆಳಗಾವಿ: ನಾಳೆಯ ಬದಲು ಇಂದೇ ಬಹುನಿರೀಕ್ಷಿತ ಕೆಜಿಎಫ್ ಭಾಗ-2 ಚಿತ್ರದ ಟೀಸರ್ ತೆರೆಕಂಡಿದೆ. ಜನೇವರಿ 8ರಂದು ಯಶ್ ಬರ್ತಡೇಗೆ ರಿಲೀಸ್ ಮಾಡಲು ಹೊಂಬಾಳೆ ಫಿಲಂಸ್ ಯೋಚಿಸಿತ್ತು. ಆದ್ರೆ ಆಗಲೇ ಆನ್ಲೈನ್ ಟೀಸರ್ ಹೊರಬಿದ್ದಿದ್ದರಿಂದ ತಡಮಾಡದೇ ಕೆಲವೇ ನಿಮಿಷಗಳ ಹಿಂದೆ ಇಂದು ರಾತ್ರಿ 09:20ಕ್ಕೆ ಟೀಸರ್ ತೆರೆ ಕಂಡಿದೆ. ಕೆಲವೇ ನಿಮಿಷಗಳಲ್ಲಿ 1.80 ಲಕ್ಷ ಜನರಿಂದ ಟೀಸರ್ ವೀಕ್ಷಣೆ ಆಗಿದ್ದು, ಅಭಿಮಾನಿಗಳ ಕಿಚ್ಚು ಹೆಚ್ಚಿಸಿದೆ.