SHARE

ಶಿವಮೊಗ್ಗ: ಶಿವಮೊಗ್ಗ ಬಳಿ ಡೈನಮೈಟ್ ಸ್ಫೋಟಗೊಂಡಿದ್ದು, 6ಕ್ಕೂ ಹೆಚ್ಚು ಜನರು ಸಾವಿಗೀಡಾಗಿರುವ ಶಂಕೆ ಇದೆ. ಆ ಪ್ರದೇಶದಲ್ಲಿ ಆಗಿರುವುದು ಭೂಕಂಪನವಲ್ಲ, ಸ್ಫೋಟ ಎನ್ನುವುದು ಖಚಿತವಾಗಿದೆ.ಶಿವಮೊಗ್ಗದ ಹುಣಸಗೋಡು ಬಳಿ ಕ್ರಶರ್ ನಲ್ಲಿ ಸ್ಫೋಟವಾಗಿದೆ. ಕೆಲಸ ಮಾಡುತ್ತಿದ್ದ 6 ಕಾರ್ಮಿಕರು ಮೃತರಾಗಿದ್ದಾರೆ. ಮೃತದೇಹಗಳು ಛಿದ್ರ ಛಿದ್ರವಾಗಿವೆ. ಲಾರಿಯೊಂದು ಸಂಪೂರ್ಣ ನುಜ್ಜುಗುಜ್ಜಾಗಿ ಬಿದ್ದಿದೆ. ಲಾರಿಯಲ್ಲೇ ಡೈನಮೈಟ್ ಒಯ್ದಿರುವ ಶಂಕೆ ಇದೆ. ಜಿಲ್ಲಾಧಿಕಾರಿ, ಎಸ್ಪಿ ಸ್ಥಳಕ್ಕೆ ಧಾವಿಸಿದ್ದಾರೆ. ಪರಿಶೀಲನೆ ನಡೆಯುತ್ತಿದೆ.