ಬೆಳಗಾವಿ:ತುಂಡಾಗಿದ್ದ ಬಾಲಕಿಯ ಬಲ ಭುಜ ಯಶಸ್ವಿಯಾಗಿ ಜೋಡಿಸಿ ವಿಜಯಾ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್ ವಿಶೇಷ ಸಾಧನೆ ಮಾಡಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆ ನಿರ್ದೇಶಕ ಡಾ. ರವಿ ಪಾಟೀಲ 2019ರ ಜೂನ್ 12ರಂದು ಬಸ್ಸಿನಿಂದ ಕೈ ಹೊರಚಾಚಿದ್ದ ಬಾಲಕಿಯ ಕೈಯನ್ನು ಎದುರಿನಿಂದ ಬರುತ್ತಿದ್ದ ವಾಹನ ಕತ್ತರಿಸಿಕೊಂಡು ಹೋಗಿತ್ತು. ಒಂದೇ ತಾಸಿನ ಒಳಗೆ ಬಾಲಕಿಯನ್ನು ವಿಜಯಾ ಆಸ್ಪತ್ರೆಗೆ ಸಾಗಿಸಿ ತರುತ್ತಿದ್ದಂತೆ, ಬೆಳಗಾವಿ ತಾಲೂಕಿನ ಬಾಲಕಿ ಅತ್ತಿಯಾ ಶೇಖಗೆ ಯಶಸ್ವಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮರು ಜೋಡಿಸಲಾಗಿದೆ ಎಂದರು.
ತುಂಡಾದ ಭಾಗಗಳನ್ನು ನೀರು ತಾಗದಂತೆ ಯಶಸ್ವಿಯಾಗಿ ತನ್ನಿ:ಯಾವುದೇ ಅವಘಡದಲ್ಲಿ ಅಂಗಾಂಗಗಳು ತುಂಡಾದರೆ, ತುಂಡಾದ ಭಾಗವನ್ನು ನೀರು ತಾಗದಂತೆ ಮುಚ್ಚಿಕೊಂಡು, ವ್ಯವಸ್ಥಿತವಾಗಿ ಆಸ್ಪತ್ರೆಗೆ ತಂದರೆ ತುಂಡಾದ ಭಾಗಗಳನ್ನು ಮರು ಜೋಡಿಸಬಹುದು(reimplantation) ಎಂದು ಮಾಹಿತಿ ನೀಡಿದರು.
ಸುದೀರ್ಘ ಹತ್ತು ಗಂಟೆಗಳ ಕಾಲ ಪ್ರಧಾನ ಪ್ಲಾಸ್ಟಿಕ್ ಸರ್ಜನ್ ಡಾ. ವಿಠ್ಠಲ ಮಾಲಮಂಡೆ, ಡಾ. ಕೌಸ್ತುಭ ದೇಸಾಯಿ, ಡಾ. ಅರವಿಂದ ಹಂಪನ್ನವರ, ಡಾ. ಶ್ರೀಧರ ಕಟವಟೆ ಹಾಗೂ ಶ್ರೀಧರ ಕಲಕೆರೆ ಅವರನ್ನು ಒಳಗೊಂಡ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದರು. ಬಾಲಕಿ ಈಗ ಯಶಸ್ವಿಯಾಗಿ ತನ್ನ ಕೈ ಚಲನೆ ನಡೆಸಿದ್ದಾಳೆ ಎಂದು ಸಂತಸ ವ್ಯಕ್ತಪಡಿಸಿದರು.