SHARE

ಬೆಳಗಾವಿ: ಕಳೆದ 20 ವರ್ಷದಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ನನಗೆ ಲಿಂಗಾಯತ ಇಲ್ಲವೇ ಜನರಲ್ ಕೋಟಾ ಅಡಿ ಟಿಕೇಟ್ ಕೊಟ್ಟರೆ ಬೆಳಗಾವಿ ಲೋಕಸಭೆಗೆ ಸ್ಪರ್ಧಿಸಲು ನಾನು ಸಿದ್ದ ಎಂದು ಬಿಜೆಪಿ ನಾಯಕ ಡಾ. ರವಿ ಪಾಟೀಲ ತಿಳಿಸಿದ್ದಾರೆ. ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಲೋಕಸಭೆಗೆ ಪಕ್ಷದ ವರಿಷ್ಠರು ಸೂಕ್ತ ಅಭರ್ಯರ್ಥಿಯ ಆಯ್ಕೆ ನಡೆಸಿರುವುದು ಸ್ವಾಗತಾರ್ಹ. ವಿಧ್ಯಾವಂತನು ಮತ್ತು ಸಮಾಜಸೆವೆಯಲ್ಲಿ ತೊಡಗಿರುವುದನ್ನು ಗಮನಿಸಿ, ಅಭ್ಯಸಿಸಿ ನನ್ನನ್ನು ಆಯ್ಕೆ ಮಾಡಿದರೆ ನಾನು ಸ್ಪರ್ಧಿಸಲು ಆಕಾಂಕ್ಷೆ ಹೊಂದಿದ್ದೇನೆ ಎಂದು ಮನದಿಂಗಿತ ಹೊರಗೆಡವಿದರು. ಪಕ್ಷದಲ್ಲಿ ರಾಷ್ಟ್ರ- ರಾಜ್ಯ ವರಿಷ್ಟ ನಾಯಕರ ಎದರು ನನ್ನ ಆಕಾಂಕ್ಷೆ ವ್ಯಕ್ತಪಡಿಸಿದ್ದೇನೆ. ನನಗೆ ಟಿಕೇಟ್ ಕೊಡಲಿ ಇಲ್ಲವೇ ಇನ್ನಾರಿಗಾದರೂ ಟಿಕೇಟ್ ಕೊಡಲಿ ನಾನು ಪಕ್ಷಕ್ಕಾಗಿ ದುಡಿಯುತ್ತೇನೆ ಎಂದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ದುಡಿಯಲು ನಾನು ಶಕ್ಯನಾಗಿದ್ದೇನೆ ಎಂದು ಭರವಸೆ ನೀಡಿದರು.