SHARE

ಬೆಳಗಾವಿ: ಪ್ರಾಥಮಿಕ ಶಾಲೆಯಲ್ಲಿ ಕಲಿಯಬೇಕಾದ ಪತ್ರಬರಹ ಜ್ಞಾನ ಅರಿಯದ ಮಹಾರಾಷ್ಟ್ರ ತನ್ನ ಹರಕುಮುರುಕು-ನಿರಾಶಾದಾಯಕ(Broken & despairing) ಇಂಗ್ಲೀಷಿನಲ್ಲಿ ಕರ್ನಾಟಕ ಸರಕಾರದ ಅಧಿಕಾರಿಗಳಿಗೆ ಪತ್ರ ಬರೆದು ನಗೆಪಾಟಲಿಗೆ ಈಡಾಗಿದೆ. ಸಾಂಗಲಿ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಅವರು ಅನ್ಯರಾಜ್ಯದ ಅಧಿಕಾರಿಗಳಿಗೆ ನೇರವಾಗಿ ಪತ್ರ ಬರೆದಿದ್ದು ‘ಮಾನ್ಯರೆ’ & ‘ವಂದನೆಗಳು’ ಎಂಬ ಪತ್ರಸಹಜ ಶಿಷ್ಟಾಚಾರ ಅರಿಯದೇ ತಮ್ಮ ಬುದ್ಧಿಗೇಡಿತನ ಪತ್ರದಲ್ಲಿ ಪ್ರದರ್ಶಿಸಿದ್ದಾರೆ. ‘ಮಹಾರಾಷ್ಟ್ರ’, -‘ಶಾಸ್ತ್ರೀ’, ‘ಶಿವಸೇನಾ’ ಹೀಗೆ ಹಲವು ಶಬ್ದಗಳನ್ನು ಬರೆಯಲು ಬಾರದೇ, ವಾಕ್ಯರಚನೆ-ವ್ಯಾಕರಣ ತಿಳಿಯದೇ ಹೆಣಗಾಡಿರುವ ಅಲ್ಲಿನ ಅಧಿಕಾರಿ ಬೆಳಗಾವಿ- ವಿಜಯಪುರ ಮತ್ತು ಚಿಕ್ಕೋಡಿ ಸಾರಿಗೆ ಡಿಸಿಗಳಿಗೆ ಪತ್ರ ಬರೆದಿದ್ದಾರೆ.

ವಿಶೇಷವಾಗಿ ಐಎಎಸ್(ಅಖಿಲ ಭಾರತ ಸೇವೆಯ) ಅಧಿಕಾರಿಗಳು ಮಾತ್ರ ತಮ್ಮ ರಾಜ್ಯ ಪ್ರತಿನಿಧಿಸಿ ದೇಶದ ಇತರ ಮೂಲೆಗಳಿಗೆ ಪತ್ರ ವ್ಯವಹಾರ ಮಾಡಬಹುದು ಎಂಬುವುದು ಸಾಮಾನ್ಯ ಜ್ಞಾನ. ಆದ್ರೆ ಇಲ್ಲಿ ಸಾರಿಗೆ ಡಿಸಿ ಒಬ್ಬ ಕರ್ನಾಟಕದ ಅಧಿಕಾರಿಗಳಿಗೆ ನೇರವಾಗಿ ಪತ್ರ ಬರೆದಿದ್ದಾನೆ.
ಮಹಾರಾಷ್ಟ್ರ ಮುನ್ನಡೆಸುತ್ತಿರುವ ಶಿವಸೇನಾ ಪಕ್ಷವನ್ನು ಸಂಕಟಕ್ಕೆ ಈಡು ಮಾಡಿರುವ ಸಾಂಗಲಿ ಸಾರಿಗೆ ನಿಯಂತ್ರಣಾಧಿಕಾರಿ, ಅಲ್ಲಿನ ಜಿಲ್ಲಾ ಮಟ್ಟದ ಶಿವಸೇನಾ ಪತ್ರ ಉಲ್ಲೇಖಿಸಿ ಕರ್ನಾಟಕಕ್ಕೆ ಎಚ್ಚರಿಕೆ ಕೊಡುವ ಧಾಟಿಯಲ್ಲಿ ಬ್ರೋಕನ್ ಭಾಷೆ ಬಳಸಿದ್ದಾನೆ. ಕರ್ನಾಟಕ ಸರಕಾರದ ಬಸ್ಸುಗಳು ಪರ್ಮೀಟ್ ಇಲ್ಲದೇ ಮಹಾರಾಷ್ಟ್ರದಲ್ಲಿ ಚಲಿಸಿ ಪ್ರಯಾಣಿಕರನ್ನು ಸಾಗಿಸುತ್ತವೆ ಯಂತೆ..! ಅಂತಹ ಬಸ್ಸುಗಳಿಗೆ ಶಿವಸೇನೆ ಏನಾದರೂ ಮಾಡಿದರೆ ಕರ್ನಾಟಕ ಸರಕಾರದ ಸಾರಿಗೆ ಅಧಿಕಾರಿಗಳು ಜವಾಬ್ದಾರರಂತೆ..!! ಈ ಬಾಲೀಶ ಎಚ್ಚರಿಕೆಯನ್ನು ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ ಜಾರಕಿಹೊಳಿ ಮತ್ತು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂಬುವುದು ಸ್ಪಷ್ಠ. ಆದರೆ ಬುದ್ಧಿಗೇಡಿ ಕೋತಿಚೇಷ್ಟೇಯ ಮಹಾರಾಷ್ಟ್ರ ಪತ್ರ ಇಂದು ಕನ್ನಡಿಗರಿಗೆ ಉಚಿತ ಮನರಂಜನೆ ನೀಡಿದೆ.