SHARE

ಬೆಳಗಾವಿ:ಎಸಿಪಿ ಸದಾಶಿವ ಕಟ್ಟಿಮನಿ ನೇತೃತ್ವದಲ್ಲಿ ತಡರಾತ್ರಿ ದಾಳಿ ನಡೆಸಿದ ಶಹಾಪುರ ಠಾಣೆ ಪೊಲೀಸರು ಗಾಂಜಾ ಮಾರಾಟಗಾರನನ್ನು ವಶಕ್ಕೆ ಪಡೆದಿದ್ದಾರೆ. ನಗರದ ಬಿ. ಎಸ್. ಯಡಿಯೂರಪ್ಪ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿತ ಜ್ಞಾನೇಶ್ವರ ಬಾಬು ಪಾಟೀಲ(೨೨) ಎಂಬುವವನನ್ನು ವಶಕ್ಕೆ ಪಡೆಯಲಾಗಿದೆ.
ಧಾಮನೆ ಮಸ್ಜಿದ್ ಗಲ್ಲಿಯ ನಿವಾಸಿ ಜ್ಞಾನೇಶ್ವರ ಜನನಿಬಿಡ ರಸ್ತೆಯಲ್ಲಿ ವ್ಯಸನಿಗಳಿಗೆ ಗಾಂಜಾ ಮಾರುತ್ತಿದ್ದ ಎನ್ನಲಾಗಿದೆ. ಆರೋಪಿತನಿಂದ 1.3 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಕಮಿಷ್ನರ್ ಕೆ. ತ್ಯಾಗರಾಜನ್, ಡಿಸಿಪಿ ವಿಕ್ರಂ ಆಮ್ಟೆ ಅಭಿನಂದಿಸಿದ್ದು, ಪೊಲೀಸರಿಗೆ ರಿವಾರ್ಡ್ ಘೋಷಿಸಲಾಗಿದೆ.