SHARE

ಬೆಳಗಾವಿ:ವಿದ್ಯುತ್ ಸಂಪರ್ಕ ಕಾಣದೆ,ಇಂದಿನ ಸರಕಾರಿ ವ್ಯವಸ್ಥೆಯೇ ನಾಚುವಂತಹ ಜೀವನ ಸಾಗಿಸುತ್ತಿದ್ದ ಜನರ ಮನೆ ಮತ್ತು ಬೀದಿಗೆ ಈಗ ಬೆಳಕು ಆವರಿಸಿದೆ. ಖಾನಾಪುರ ತಾಲೂಕಿನ ಹಲಕರ್ಣಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಕಳೆದ 30 ವರ್ಷಗಳಿಂದ ಈ ಪಂಚಾಯಿತಿ ಮನೆಬೀದಿಗಳು ಬೆಳಕು ಕಂಡಿರಲಿಲ್ಲ ಎನ್ನಲಾಗಿದೆ. ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳಕರ ಅವರ ವಿಶೇಷ ಪ್ರಯತ್ನದಿಂದ ಗ್ರಾಮಸ್ಥರ ಮನೆಯಲ್ಲಿ ದೀಪ ಉರಿದಿದೆ.

ಹಾವು, ಹಲ್ಲಿ ಸರಿಸೃಪಗಳ ಭಯದಿಂದ ಜೀವನ ಸಾಗಿಸುತ್ತಿದ್ದ ಗ್ರಾಮಸ್ಥರು ಈಗ ವಿದ್ಯುತ್ ದೀಪ ಕಂಡು ಎಲ್ಲಿಲ್ಲದ ಸಂತಸ ವ್ಯಕ್ತಪಡಿಸಿದ್ದಾರೆ. ಆಧುನಿಕ ಭಗೀರತನಂತೆ, ಇಂದು ಅಗತ್ಯ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವಲ್ಲಿ ಡಾ. ಅಂಜಲಿ ಯಶಸ್ವಿಯಾಗಿದ್ದಾರೆ. ಭಗೀರತ ನೀರು ಹರಿಸಿದರೆ, ಡಾ. ಅಂಜಲಿ ದೀಪ ಬೆಳಗಿಸಿ ಜನರ ಮುಖದಲ್ಲಿ ಮಂದಹಾಸಕ್ಕೆ ಕಾರಣರಾಗಿದ್ದಾರೆ.