SHARE

ಬೆಳಗಾವಿ: ಬೆಳಗಾವಿ-ಜಾಂಬೋಟಿ ಅಂತರರಾಜ್ಯ ಹೆದ್ದಾರಿಯಲ್ಲಿ ಸಾರ್ವಜನಿಕರ ಸುಲಿಗೆ ಮಾಡುತ್ತಿದ್ದ ಐವರನ್ನು ನಗರ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಇಂದು ಬೆಳಂಬೆಳಿಗ್ಗೆ 1ರ ಸುಮಾರಿಗೆ ಕಿಣಯೇ ಘಾಟನಲ್ಲಿ ತಪಾಸಣೆ ನಡೆಸಿ ಹೆದ್ದಾರಿ ವಾಹನ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದ ಖದೀಮರನ್ನು ವಶಕ್ಕೆ ಪಡೆದಿದ್ದಾರೆ. ಭರನಟ್ಟಿ ಗ್ರಾಮದ ನಿಂಗಪ್ಪ ಸಿ. ನಾಯಕ, ಸಿದ್ಧಪ್ಪ ಭೀ. ನಾಯಕ, ಭೀಮಪ್ಪ ಸಿ. ನಾಯಕ, ಭರಮಪ್ಪ ನಿಂಗಪ್ಪ ಪೂಜಾರಿ ಹಾಗೂ ಕಮಲನಗರದ ಮಾರುತಿ ನಿಂಗಪ್ಪ ನಾಯಕ ಅವರನ್ನು ಬಂಧಿಸಿ ಅವರಿಂದ ಹರಿತ ಆಯುಧಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.