SHARE

ಬೆಳಗಾವಿ:ಬಹುತೇಕ ಒಂದು ವಾರದ ನಂತರ ಕರ್ನಾಟಕ-ಮಹಾರಾಷ್ಟ್ರ ಉಭಯ ರಾಜ್ಯಗಳ ಮಧ್ಯೆ ಸರಕಾರಿ ಬಸ್ ಸಂಚಾರ ಇಂದು ಪುನರ್ ಆರಂಭವಾಗಿದೆ. ನೆರೆಯ ಕೊಲ್ಲಾಪುರದಲ್ಲಿ ಗರಿಗೆದರಿದ್ದ ಕನ್ನಡ ವಿರೋಧಿ ಉಪಟಳ ಮತ್ತು ಶಿವಸೇನೆಯ ಗೂಂಡಾಗಿರಿ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಉಭಯ ರಾಜ್ಯಗಳ ನಡುವೆ ಸರಕಾರಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಮಹಾರಾಷ್ಟ್ರದ ಗಡಿ ನಿಪ್ಪಾಣಿವರೆಗೆ ಮಾತ್ರ ಕರ್ನಾಟಕದ ಬಸ್ಸುಗಳು ಸಂಚರಿಸುತ್ತಿದವು. ಇದೀಗ ಬಸ್ ಸಂಚಾರಕ್ಕೆ ಕೊಲ್ಲಾಪುರ ಸಾರಿಗೆ ಅಧಿಕಾರಿಗಳು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಬಸ್ ಸಂಚಾರ ಆರಂಭವಾಗಿದೆ. ಬಹುತೇಕ ಕಳೆದ ಒಂದು ವಾರದಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದರ ಪರಿಣಾಮ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿತ್ತು. ಬೆಳಗಾವಿ ಬಸ್ ಡಿಪೋಗೆ 50 ಲಕ್ಷ ಮೇಲ್ಪಟ್ಟು ನಷ್ಟವಾದ ಬಗ್ಗೆ ಬೆಳಗಾವಿ ಸಾರಿಗೆ ನಿಯಂತ್ರಣಾಧಿಕಾರಿ ಎಂ. ಆರ್. ಮುಂಜಿ ಸೋಮವಾರ ಆತಂಕ ವ್ಯಕ್ತಪಡಿಸಿದ್ದರು.