SHARE

ಬೆಳಗಾವಿ:ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಜನ ಅಸಮಧಾನ ಹೊಂದಿರುವ ಮಧ್ಯೆ ಸ್ಮಾರ್ಟ್ ಸಿಟಿ ಅಧಿಕಾರಿಯೊಬ್ಬ ಲಂಚದ ಹಣದ ಸಮೇತ ರೆಡ್ ಹ್ಯಾಂಡ್ ಸಿಕ್ಕಿದ್ದಲ್ಲದೇ, ಮನೆ ತಪಾಸಿಸಿದಾಗ ಬಹುಲಕ್ಷ ಅಕ್ರಮ ಹಣದ ಕಂತೆಗಳು ಸಿಕ್ಕು ಎಸಿಬಿಗೆ ಟ್ರ್ಯಾಪ್ ಆಗಿದ್ದಾನೆ.
ಮುಖ್ಯ ಎಂಜಿನೀಯರ್ ರ್ಯಾಂಕ್ ನ ಈ ಅಧಿಕಾರಿ ಸಿದ್ದನಾಯಕ ದೊಡ್ಡಬಸಪ್ಪ, 60 ಸಾವಿರ ಲಂಚ ಮನೆಯಲ್ಲಿಯೇ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದಾರೆ. ಆರೋಪಿತ ನೌಕರನ ಮನೆ ತಪಾಸಿಸಿದಾಗ 23,56,000 ಅಕ್ರಮ ನಗದು ಹಣ ಪತ್ತೆಯಾಗಿದ್ದು ಅಧಿಕಾರಿಯನ್ನು ವಶಕ್ಕೆ ಪಡೆಯಲಾಗಿದೆ. ಸಂಜೀವಕುಮಾರ ನವಲಗುಂದ ಎಂಬ ಗುತ್ತಿಗೆದಾರ ಎಸಿಬಿಗೆ ದೂರು ಸಲ್ಲಿಸಿದ್ದರು. ಎಸಿಬಿ ಎಸ್ಪಿ ಬಿ. ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಡಿಎಸ್ಪಿ ಕರುಣಾಕರಶೆಟ್ಟಿ, ಇನ್ಸಪೆಕ್ಟರಗಳಾದ ಎ. ಎಸ್. ಬೂದಗೊಪ್ಪ, ಎಚ್. ಸುನೀಲಕುಮಾರ ದಾಳಿ ನಡೆಸಿದರು. ಅಧಿಕಾರಿಯನ್ನು ಬಂಧಿಸಲಾಗಿದೆ.