SHARE

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕ್ಷಣಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಇದೀಗ ಸಿಡಿ ಯುವತಿಯ ಪೋಷಕರು ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಇಂದು ಬೆಳಿಗ್ಗೆ ಹೊಸ ವಿಡಿಯೋ ಬಿಡುಗಡೆ ಮಾಡಿದ್ದ ಸಿಡಿ ಲೇಡಿ, ತನ್ನ ತಂದೆ-ತಾಯಿಗೆ ರಕ್ಷಣೆ ಇಲ್ಲ ಎನಿಸುತ್ತಿದೆ. ಅವರು ಎಲ್ಲಿದ್ದಾರೆ ಎಂಬುದೂ ನನಗೆ ತಿಳಿಯುತ್ತಿಲ್ಲ. ಅವರನ್ನು ಬೆಂಗಳೂರಿಗೆ ಕರೆತಂದು ನನ್ನ ಅಪ್ಪ-ಅಮ್ಮ, ಅಜ್ಜಿ ಹಾಗೂ ಸಹೋದರರಿಗೆ ಎಸ್ ಐಟಿ ರಕ್ಷಣೆ ನಿಡಬೇಕು. ನಾನು ಅವರ ಮುಂದೆಯೇ ಹೇಳಿಕೆ ನೀಡುವುದಾಗಿ ತಿಳಿಸಿದ್ದಳು. ಇದರ ಬೆನ್ನಲ್ಲೇ ಇದೀಗ ಯುವತಿ ಪೋಷಕರು ಆಡುಗೋಡಿ ಎಸ್ ಐಟಿ ತಾಂತ್ರಿಕ ವಿಭಾಗದ ಮುಂದೆ ಹಾಜರಾಗಿದ್ದಾರೆ.