SHARE

ಬೆಳಗಾವಿ: ಸ್ಪ್ಯಾರೋ ಕನ್ಸರ್ವೇಶನ್ ಫೌಂಡೇಶನ್ ಮತ್ತು ಅರಣ್ಯಾಧಿಕಾರಿಗಳ ಬಳಗದ ವತಿಯಿಂದ ಗುಬ್ಬಚ್ಚಿ ಮಾಸದ ಅಂಗವಾಗಿ ಇಂದು ಬೆಳಿಗ್ಗೆ ನಗರದ ಕುವೆಂಪು ನಗರದಲ್ಲಿ ಸಸೀಕರಣ ಹಾಗೂ ಗೂಡು ಅಳವಡಿಕೆ ಕಾರ್ಯಕ್ರಮ ನಡೆಯಿತು. ಎಸಿಎಫ್ ಸಂಗಮೇಶ ಎನ್. ಪ್ರಭಾಕರ ಮಾತನಾಡಿ ಬೇಸಿಗೆಯಲ್ಲಿ ಪಕ್ಷಿಗಳು ನೀರು ಆಹಾರ ಇಲ್ಲದೇ ಬಳಲುತ್ತಿದ್ದು ನಗರದ ಪ್ರತಿ ಮನೆಯಲ್ಲಿ ಕುಡಿಯಲು ನೀರು ಮತ್ತು ಆಹಾರಕ್ಕಾಗಿ ಕಾಳು ಇಟ್ಟು ವನ್ಯರಕ್ಷಣೆ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಸಾರ್ವಜನಿಕ ಕರೆ ನೀಡಿದರು.ಪಕ್ಷಿಗಳ ಜೀವಾವಸಕ್ಕೆ ಯೋಗ್ಯ ಸಸಿಗಳನ್ನು ನೆಡಲಾಯಿತು. ಪಕ್ಷಿಗಳಿಗೆ ಕುಡಿಯಲು ನೀರಿಗಾಗಿ ಮಣ್ಣಿನ ತೊಟ್ಟಿ, ಫುಡ್ ಫೀಡರ್ ಹಾಗೂ ವಾಸದ ಗೂಡು ಅಳವಡಿಸಲಾಯಿತು. ಸ್ಪ್ಯಾರೋ ಕನ್ಸರ್ವೇಶನ್ ಫೌಂಡೇಶನ್ ಅಧ್ಯಕ್ಷ ಜಿ. ಪುರುಷೋತ್ತಮ, ಉಪಾಧ್ಯಕ್ಷ ಶ್ರೀನಾಥ ಕಡೋಲಕರ, ಪದಾಧಿಕಾರಿಗಳಾದ ವಿಜಯ ಪಾಟೀಲ, ಡಾ. ಸಂಜಯ ದೇಶಪಾಂಡೆ, ಡಿಆರ್ ಎಫ್ ಓ ವಿನಯ ಗೌಡರ, ಪತ್ರಕರ್ತ ಜನಜೀವಾಳ ಶಿವರಾಯ ಏಳುಕೋಟಿ, ಪುಟಾಣಿಯರಾದ ಪ್ರೇರಣಾ-ಪ್ರತಿಕ್ಷಾ ಹಾಗೂ ಕುವೆಂಪು ನಗರದ ರಹವಾಸಿಗಳು ಭಾಗವಹಿಸಿದರು.