SHARE

ಬೆಳಗಾವಿ:ಸಿಡಿ ಪ್ರಕರಣದ ಬಗ್ಗೆ ಎಳ್ಳಷ್ಟು ಮಾತಾಡಲು ನಿರಾಕರಿಸಿರುವ ಡಿ. ಕೆ. ಶಿವಕುಮಾರ ತನಗೂ ಆ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಂದು ತಾವು ತಂಗಿದ್ದ ನಗರದ ಖಾಸಗಿ ಹೊಟೆಲ್ ಬಳಿ ಮಾಶ್ಯಮಗಳಿಗೆ ಪ್ರತಿಕ್ರಿಯಿಸಿ ನಾನು ಚುನಾವಣಾ ಪ್ರಚಾರ ಮತ್ತು ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಕೆಲಸದಲ್ಲಿ ಬ್ಯುಸಿ ಆಗಿದ್ದು ತನಗೆ ಸಂಬಂಧವಿಲ್ಲದ ವಿಷಯ ಪದೇಪದೇ ಕೇಳದಂತೆ ಡಿಕೆಶಿ ಮಾಧ್ಯಮಗಳಿಗೆ ಮನವಿ ಮಾಡಿದರು. ಪಕ್ಷ ಮತ್ತು ಜಿಲ್ಲಾ ರಾಜಕಾರಣದಲ್ಲಿ ಸ್ವಲ್ಪವೂ ಅಪಸ್ವರ ಬಾರದ ರೀತಿಯಲ್ಲಿ ಸತೀಶ ಜಾರಕಿಹೊಳಿ ಅಭ್ಯರ್ಥಿತನ ಎಲ್ಲರೂ ಒಪ್ಪಿಕೊಂಡಿದ್ದಾರೆ. ಬಿಜೆಪಿಯ ದುರಾಡಳಿತ, ಬೆಲೆ ಏರಿಕೆ ನಮ್ಮ ಅಭ್ಯರ್ಥಿ ಗೆಲುವಿಗೆ ವರದಾನ ಎಂದರು.

ಅಶೋಕ ಪೂಜಾರಿ ಕಾಂಗ್ರೆಸ್ ಗೆ: ಸುದೀರ್ಘ ಅವಧಿಯಿಂದ ಜೆಡಿಎಸ್ ನಾಯಕನಾಗಿ ಗೋಕಾಕ ಪ್ರಸಿದ್ದಿ ಪಡೆದ ಅಶೋಕ ಪೂಜಾರಿ ಅವರನ್ನು ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಡಿಕೆಶಿ ತಿಳಿಸಿದ್ದಾರೆ. ಅಶೋಕ ಪೂಜಾರಿ ಅವರೊಂದಿಗೆ ಮಾತನಾಡಿದ್ದೇನೆ. ನಮ್ಮ ಪಕ್ಷದ ಹಿರಿಯರೊಂದಿಗೆ ಚರ್ಚಿಸಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವೆ ಎಂದರು.