SHARE

ಬೆಳಗಾವಿ:ತೀರಾ ಅಸಹ್ಯ ಎನ್ನಿಸುವಷ್ಟರ ಮಟ್ಟಿಗೆ ಬೆಳಗಾವಿಯಲ್ಲಿ ಪೊಲೀಸ್ ಕಿರುಕುಳ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕ ಆಕ್ರೋಶದ ಜೊತೆಗೆ ಸ್ವತಃ ಪೊಲೀಸ್ ಪೆದೆಗಳ ಅಸಮಧಾನ ವ್ಯಕ್ತವಾಗಿದೆ. ನಗರ ಪೊಲೀಸ್ ಈಗ ಪೊಲೀಸಿಂಗ್ ಹೊರತಾಗಿ ‘ಆದಾಯ ಆಕರಣೆ’ ಇಲಾಖೆಯಾಗಿ ಬದಲಾಗಿದೆ. ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಸಾಮರಸ್ಯ ಹಾಳಾಗಲು ಇತ್ತೀಚೆಗೆ ಟ್ರಾಫಿಕ್ ಗೆ ಬಂದ ಪೋಲಿ ಅಧಿಕಾರಿಗಳೇ ಕಾರಣ ಎಂದು ಸ್ವತಃ ಇಲಾಖೆಯ ಸಿಬ್ಬಂಧಿ ಆರೋಪಿಸಿದ್ದಾರೆ. ತುಸು ಹೆಚ್ಚೇ ಕಸಿವಿಸಿಗೊಂಡಿರುವ ಪೊಲೀಸ್ ಸಿಬ್ಬಂಧಿ ಈಗ ಮೇಲಾಧಿಕಾರಿಗಳ ಎದುರು ನೇರವಾಗಿ ತಿರುಗಿ ಬಿದ್ದಿದ್ದಾರೆ.

ಮೇಲಾಧಿಕಾರಿಗಳ ಯರ್ರಾಬಿರ್ರಿ ಆದೇಶಗಳು ಮತ್ತು ಒತ್ತಡದಿಂದಾಗಿ ನಾವು ಸಾರ್ವಜನಿಕರೊಂದಿಗೆ ದಿನನಿತ್ಯ ಘರ್ಷಣೆಗೆ ಇಳಿಯಬೇಕಾಗಿದೆ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಕೇಳಿಸಿಕೊಳ್ಳುವ ಇಲ್ಲವೇ ಮಾನವೀಯತೆ ಮೆರೆಯಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ಪೊಲೀಸ್ ಪೆದೆಗಳ ಆಕ್ರೋಶಭರಿತ ಉವಾಚ ಈಗ ಗಮನ ಸೆಳೆದಿದೆ. ಸಾರ್ವಜನಿಕರ ವಿಚಾರಣೆಗೆ ಮತ್ತು ಸ್ಥಳದಂಡಕ್ಕೆ ಕನಿಷ್ಠ ಎಎಸ್ ಐ ಸ್ಥಳದಲ್ಲಿ ಹಾಜರಿರುವುದು ಕಡ್ಡಾಯ. ಆದರೆ ಪೊಲೀಸ್ ಪೆದೆಗಳಿಗೆ ವಾಹನಗಳ ತಪಾಸಣೆ ಹಾಗೂ ದಂಡ ಆಕರಣೆಗೆ ಒತ್ತಾಯಪಡಿಸಿ ಟಾರ್ಗೇಟ್ ಕೊಡುತ್ತಿರುವುದು ಈಗ ಗಮನ ಸೆಳೆದಿದೆ. ಈ ಮಧ್ಯೆ ಬೆಳಗಾವಿ ಟ್ರಾಫಿಕ್ ವ್ಯವಸ್ಥೆ ಹದಗೆಡಲು ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಬೇಜವಾಬ್ದಾರಿಯ ಟೈಮ್ ಪಾಸ್ ನಡೆ ಎಂಬುವುದನ್ನು ಸ್ವತಃ ಪೊಲೀಸ್ ಪೆದೆಗಳೇ ಈಗ ಬಹಿರಂಗಪಡಿಸಿದ್ದಾರೆ. ಪೊಲೀಸ್ ಇಲಾಖೆ ಜನರನ್ನು ಟ್ರಾಫಿಕ್ ನಿಯಮ ‌ಪಾಲಿಸುವಂತೆ ಜನರಿಗೆ ತಿಳಿವಳಿಕೆ ಮಾಡಲು ದಂಡ ಆಕರಿಸುವ ಬದಲು, ದಂಡ ಸೆಳೆಯಲು ರಸ್ತೆಗಳಲ್ಲಿ ನಿಂತಂತೆ ವರ್ತಿಸುತ್ತಿದೆ. ಸಾರ್ವಜನಿಕರು ಮತ್ತು ಕೆಳಹಂತದ ಸಿಬ್ಬಂಧಿ ಈಗ ರಾಜಕೀಯ ನೇತಾರರಿಗೆ ದೂರು ಸಲ್ಲಿಸಲು ನಿರ್ಧರಿಸಿದ್ದು, ಇಲಾಖೆಯ ಹಣದ ಹಪಾಹಪಿ ದೂರು ಸರಕಾರದ ಮಟ್ಟಕ್ಕೆ ಕೊಂಡೊಯ್ಯುವುದು ಸನ್ನಿಹಿತವಾಗಿದೆ. ಟ್ರಾಫಿಕ್ ವಿಭಾಗದ ಪೊಲೀಸ್ ಅಧಿಕಾರಿಗಳು ತಮ್ಮ ಕಚೇರಿಯಿಂದ ಹೊರಬೀಳದೆ ಅಂಧಾದುಂಧಿ ಆಲಸ್ಯ ವ್ಯವಹಾರ ಮಾಡುತ್ತಿರುವ ಬಗ್ಗೆ ಪೊಲೀಸ್ ಪೆದೆಗಳು ಆರೋಪಿಸಿದ್ದಾರೆ. ಬೆಳಗಾವಿ ಸಂಚಾರ ಪೊಲೀಸರಿಗೆ ಆಗುತ್ತಿರುವ ಕಿರುಕುಳ ಈಗ ಹಿರಿಯ ಅಧಿಕಾರಿಯ ತಲೆದಂಡದ ಹಂತದವರೆಗೆ ಹೋಗುವ ಲಕ್ಷಣಗಳು ಗೋಚರಿಸಿವೆ.