SHARE

ಬೆಳಗಾವಿ: ಜೀವನಕ್ಕೆ ಆಸರೆ ಇಲ್ಲದೆ ಬೆಳಗಾವಿ ನಗರಕ್ಕೆ ಆಗಮಿಸಿ ಸಹಾಯದ ನಿರೀಕ್ಷೆಯಲ್ಲಿದ್ದ ವೃದ್ಧೆಯೊಬ್ಬರಿಗೆ ಸಾಮಾಜಿಕ ಕಾರ್ಯಕರ್ತ ಸುರೇಂದ್ರ ಅನಗೋಳಕರ ಸಹಾಯ ಹಸ್ತ ಚಾಚಿ ನಗರದ ಹಳೆಬೆಳಗಾವಿ ಮಹಾನಗರ ಪಾಲಿಕೆ ಕೇರ್ ಸೆಂಟರ್ ಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಮಾರ್ಕೇಟ್ ಪೊಲೀಸ್ ಠಾಣೆಯ ಎದುರು ರಸ್ತೆ‌ಬದಿ ಕುಳಿತಿದ್ದ ಅಜ್ಜಿಯ ಅಸಹಾಯಕತೆಯ ಮಾಹಿತಿ ಪಡೆದ ಸುರೇಂದ್ರ ಅನಗೋಳಕರ ತಮ್ಮ ಗೆಳೆಯರ ಬಳಗದೊಂದಿಗೆ ಆಗಮಿಸಿ ಅವರನ್ನು ಕೇರ್ ಸೆಂಟರ್ ಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.ಗೋಕಾಕ ತಾಲೂಕು ಅರಭಾವಿಯ ಮಾಯವ್ವ ದೇವನ್ನವರ(೫೮) ಎಂಬ ಮಹಿಳೆ ತನಗೆ ಊರಲ್ಲಿ ಆಸರೆಗೆ ಅಂತ ಯಾರೂ ಇಲ್ಲ ಎಂಬ ಮಾಹಿತಿಯನ್ನು ದಾರಿಹೋಕರಿಗೆ ನೀಡಿದ್ದಾಳೆ. ಇದರಿಂದ ನೊಂದ ಸಾರ್ವಜನಿಕರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕೊನೆಗೆ ಸಾಮಾಜಿಕ ಕಾರ್ಯಕರ್ತ ಸುರೇಂದ್ರ ಅನಗೋಳಕರ ಅವರಿಂದ ಅಜ್ಜಿಗೆ ಸೂಕ್ತ ಸಹಾಯ ಸಿಕ್ಕಿದೆ.‌ಆಕೆಯ ಪತಿ ಕಳೆದ ನಾಲ್ಕು ವರ್ಷಗಳ ಹಿಂದೆಯೇ ಅಸುನೀಗಿದ್ದು, ಇದ್ದ ಬಾಡಿಗೆ ಮನೆಯೂ ಉರುಳಿ ಅವಳಿಗೆ ತಬ್ಬಲಿ ಆಗಿದ್ದಳು. ಆಸರೆ ಸಿಗುವ ಆಕಾಂಕ್ಷೆಯಿಂದ ಬೆಳಗಾವಿಗೆ ಬಂದಿದ್ದ ಅಜ್ಜಿಗೆ ದಾರಿಹೋಕರು ಮಾಡಿದ ಸಹಾಯ, ಆದರದಿಂದ ಮುಂದೆ ಬಂದ ಸುರೇಂದ್ರ ಅನಗೋಳಕರ ನಡೆ ಅವಳಿಗೆ ಆಶ್ಯ ನೀಡಿದೆ. ಎರಡ್ಮೂರು ದಿನಗಳಲ್ಲಿ ವೃದ್ಧಾಶ್ರಮವೊಂದರಲ್ಲು ಖಾಯಂ ಆಸರೆ ಕೊಡಿಸಲು ಯತ್ನ ನಡೆಸಿದ್ದಾರೆ.