SHARE

ಬೆಳಗಾವಿ:ಬೆಳಗಾವಿ ನಗರ ಉತ್ತರ ಮತಕ್ಷೇತ್ರದ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂಧಿಗೆ ನಗರದ ಇಸ್ಲಾಮಿಯಾ ಮಹಾವಿಧ್ಯಾಲಯದಲ್ಲಿ ಚುನಾವಣಾ ತರಬೇತಿ ನೀಡಲಾಯಿತು. ಸಹ ಚುನಾವಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಕಮಿಷ್ನರ್ ಕೆ. ಎಚ್. ಜಗದೀಶ ನಿಯೋಜಿತ ಮತಗಟ್ಟೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ ಪರಿಶೀಲಿಸಿದರು.
ಸರಕಾರದ ವಿವಿಧ ಇಲಾಖೆಗಳ ನೂರಾರು ಅಧಿಕಾರಿಗಳು ಮತ್ತು ಸಿಬ್ಬಂಧಿ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ನಗರದ ಎರಡು ಕಡೆಗೆ ತರಬೇತಿ ಕಾರ್ಯಕ್ರಮಗಳು ನಡೆದಿದ್ದು, ಮತದಾನ ಪೂರ್ವ ಖುದ್ದು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಗುತ್ತದೆ.