SHARE

ಬೆಳಗಾವಿ: ಕೊರೋನಾ ಮಹಾಮಾರಿ ಎರಡನೇಯ ರೌದ್ರಾವತಾರಕ್ಕೆ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಠಿಯಾಗಿದ್ದು, ಖಾನಾಪುರ ತಾಲೂಕಿನ ಅಬನಾಳಿಯ ಸಣ್ಣ ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಬರೋಬ್ಬರಿ 144 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಬೆಳಗಾವಿ ಜಿಲ್ಲೆ ‌ಖಾನಾಪುರ ತಾಲೂಕಿನ ಅಬನಾಳಿಯ ಅಶೋಕ ನಗರದ ಪ್ರಾಥಮಿಕ ‌ಆರೋಗ್ಯ ಕೇಂದ್ರದಲ್ಲಿ ರ‌್ಯಾಂಡಮ್ ಟೆಸ್ಟ್ ಮಾಡಿಸಲಾಗಿತ್ತು. ರ‌್ಯಾಂಡಮ್ ಟೆಸ್ಟ್ ವೇಳೆ 144 ಜನರಿಗೆ ಕೊರೊನಾ ಸೋಂಕು ‌ದೃಢವಾಗಿದ್ದು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿ ನಿರ್ಮಾಣವಾಗಿದೆ. 300 ಜನಸಂಖ್ಯೆ ‌ಹೊಂದಿರುವ ಅಬನಾಳಿ ಗ್ರಾಮದ ಅರ್ಧಕ್ಕೂ ಅಧಿಕ ಜನರಿಗೆ ವಕ್ಕರಿಸಿದ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇವರು ಮಹಾರಾಷ್ಟ್ರ, ಗೋವಾಗೆ ಹೋಗಿದ್ದ ವಲಸೆ ಕಾರ್ಮಿಕರು ಸ್ವಗ್ರಾಮಕ್ಕೆ ವಾಪಸ್ ಬಂದಿದ್ದರಿಂದ ಸೋಂಕು ಹರಡಿದ ಶಂಕೆ ವ್ಯಕ್ತವಾಗಿದೆ.

ಒಂದೇ ಗ್ರಾಮದಲ್ಲಿನ 144 ಜನ ಸೋಂಕಿತರ ಟ್ರಾವೆಲ್ ‌ಹಿಸ್ಟರಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸೋಂಕಿತರೆಲ್ಲರಿಗೂ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಅಧಿಕಾರಿಗಳ ಸೂಚನೆ ನೀಡಿದ್ದಾರೆ. ಅಲ್ಲದೆ ಇಡೀ ಗ್ರಾಮವನ್ನೇ ಕಂಟೈನ್‌ಮೆಂಟ್ ಝೋನ್ ಮಾಡಲು ಬೆಳಗಾವಿ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಅಬನಾಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರ ಥ್ರೋಟ್ ಸ್ವ್ಯಾಬ್ ಪಡೆಯಲು ಮುಂದಾದ ಆರೋಗ್ಯ ಇಲಾಖೆ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿ ನಿರ್ಮಾಣ ವಾಗಿದೆ.