SHARE

ಬೆಳಗಾವಿ; ಕ್ರೆಡೈ (Confederation of Real Estate Developers Association) ಕರ್ನಾಟಕ 6 ನೇ ರಾಜ್ಯಾಧ್ಯಕ್ಷರಾಗಿ ಬೆಳಗಾವಿಯ ಚೈತನ್ಯ ಕುಲಕರ್ಣಿ ಆಯ್ಕೆಯಾಗಿದ್ದಾರೆ. ಶುಕ್ರವಾರ ನಡೆದ ಅಸೋಸಿಯೇಶನ್ ವಾರ್ಷಿಕ ಸರ್ವಾಸಾಧಾರಣ ಸಭೆ (ವರ್ಚ್ಯುವಲ್) ಯಲ್ಲಿ 2021 -23ರ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನ ಹೊರಗಿನ ಸದಸ್ಯರೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಚೈತನ್ಯ ಕುಲಕರ್ಣಿ ಬೆಳಗಾವಿಯವರಾಗಿದ್ದು, ಉತ್ತರ ಕರ್ನಾಟಕದ ಪ್ರಮುಖ ಬಿಲ್ಡರ್ ಆ್ಯಂಡ್ ಡೆವಲಪರ್ ಆಗಿದ್ದಾರೆ. ಮುಂದಿನ 2 ವರ್ಷಗಳ ಕಾಲ ಅವರು ರಾಜ್ಯ ಕ್ರೆಡೈಯನ್ನು ಮುನ್ನಡೆಸಲಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಆಸ್ಟಿನ್ ರೋಚ್ ಚೈತನ್ಯ ಕುಲಕರ್ಣಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ರಾಷ್ಟ್ರೀಯ ಉಪಾಧ್ಯಕ್ಷ ಜಿ.ರಾಮ ರಡ್ಡಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಶಂಕರ ಶಾಸ್ತ್ರಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ರಾಷ್ಟ್ರೀಯ ಸಮಿತಿ ಸದಸ್ಯ ಬಾಲಕೃಷ್ಣ ಹೆಗಡೆ, ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ನಾಗರಾಜ ರೆಡ್ಡಿ, ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಶ್ರೀರಾಮ, ಕ್ರೆಡೈ ಕರ್ನಾಟಕದ ಮಾಜಿ ಅಧ್ಯಕ್ಷ ಜಗದೀಶ ಬಾಬು ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಆಸ್ಟಿನ್ ರೋಚ್ ಚೇರಮನ್ ಆಗಿ, ವಿಜಯಪುರ ಕ್ರೆಡೈ ಮಾಜಿ ಅಧ್ಯಕ್ಷ ಅನುಪಮ್ ರುನುವಾಲ್ ಕಾರ್ಯದರ್ಶಿಯಾಗಿ, ಬೆಂಗಳೂರಿನ ಶಿವರಾಮ ಕುಮಾರ ಮಲಕಾಲ ಖಜಾಂಚಿಯಾಗಿ, ಸಂಜೋಗ್ ರಾಠಿ ಮತ್ತು ಡಿ.ಬಿ.ಮೆಹತಾ ಉಪಾಧ್ಯಕ್ಷರಾಗಿ, ಕೈಸ್ ನೂರಾನಿ ಹಾಗೂ ಸಿರಾಜ್ ಅಹ್ಮದ್ ಜಂಟಿ ಕಾರ್ಯದರ್ಶಿಗಳಾಗಿ ಆಯ್ಕೆಯಾದರು. ಪ್ರೆಸಿಡೆಂಟ್ ಇಲೆಕ್ಟ್ ಆಗಿ ಪ್ರದೀಪ್ ಡಿ.ರಾಯ್ಕರ್ ಆಯ್ಕೆಯಾದರು.