SHARE

ಬೆಳಗಾವಿ: ಕೊರೋನಾ ಸಂಕಟಮಯ ಪರಿಸ್ಥಿತಿಯಲ್ಲಿ ಬೆಳಗಾವಿ ಬಿಮ್ಸ್ ಕೊರೋನಾ ಸೋಂಕಿತರಿಗೆ ಸಮರ್ಪಕ ವೈದ್ಯಕೀಯ ಚಿಕಿತ್ಸೆ ನೀಡದೆ ಅವ್ಯವಸ್ಥೆ ತಾಂಡವವಾಡುವ ರೀತಿಯಲ್ಲಿ ಮಾರ್ಪಟ್ಟ ಕಾರಣ ನಿರ್ದೇಶಕರ ಮೇಲೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸರ್ಕಾರ ಎಚ್ಚತ್ತುಕೊಂಡು ಬಿಮ್ಸ್ ವೈದ್ಯಕೀಯ ನಿರ್ದೇಶಕ ಡಾ.ವಿನಯ್‌ ದಾಸ್ತಿಕೊಪ್ಪ ಅವರನ್ನು ರಾಜ್ಯ ಸರಕಾರ ಈಗ ರಜೆ ಮೇಲೆ ಕಳುಹಿಸಿದೆ.

ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಶುಕ್ರವಾರ ಬೆಳಗಾವಿಗೆ ಆಗಮಿಸುವ ಬೆನ್ನಲ್ಲೇ ಡಾ. ವಿನಯ್ ದಾಸ್ತಿಕೊಪ್ಪ ಅವರನ್ನು ಸರಕಾರ ರಜೆ ಮೇಲೆ ಕಳುಹಿಸಿದೆ.‌

ಅಷ್ಟೇ ಅಲ್ಲ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೂಡ ಬೀಮ್ಸ್ ಗೆ ಬೆಟ್ಟಿ ನೀಡಿ ಇದು ದನದ ಕೊಟ್ಟಿಗೆ ಗಿಂತಲೂ ಕಡೆಯಾಗಿದೆ ಎಂದು ಹೇಳಿದ್ದಲ್ಲದೆ, ನಾಲ್ಕೆ ನಾಲ್ಕು ದಿನದಲ್ಲಿ ಏನಾಗುತ್ತದೆ ಕಾದು ನೋಡಿ ಎಂದು ಹೇಳಿದ್ದರು. ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾರಜೋಳ ಕೂಡ ಬೀಮ್ಸ್ ಅವ್ಯವಸ್ಥೆ ಬಗ್ಗೆ ಕಿಡಿ ಕಾರಿದ್ದರು.

ಅದೆಲ್ಲದರ ಪರಿಣಾಮ ಬೀಮ್ಸ್ ಡೈರೆಕ್ಟರ್ ದಾಸ್ತಿಕೊಪ್ಪ ರಜೆ ಮೇಲೆ ತೆರಳಲು ಸರ್ಕಾರ ಸೂಚನೆ ನೀಡಿದೆ.