SHARE

ಬೆಳಗಾವಿ: ಗೋಲಿಹಳ್ಳಿ ಅರಣ್ಯ ವಲಯದ ಕಿತ್ತೂರು-ಕುಲವಳ್ಳಿ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳನ್ನು ಬೇಟೆ ಆಡುತ್ತಿದ್ದ ಮೂವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ರಾಷ್ರ್ಟೀಯ ಹೆದ್ದಾರಿಯಲ್ಲಿ ಚೇಸ್ ಮಾಡುವ ಮೂಲಕ ಬಂಧಿಸಿದ್ದಾರೆ. ಬೆಳಗಾವಿ ತಾಲ್ಲೂಕಿನ ಕರಿಕಟ್ಟಿ ಗ್ರಾಮದ ಬಸವರಾಜ ಲಕ್ಕಪ್ಪ‌ ಬೋರಿಮರದ(35),ದುರ್ಗಪ್ಪ‌ ಬರಮಪ್ಪ ಬೋರಿಮರದ (26) ಹಾಗೂ ‌ಸತ್ಯಪ್ಪ‌ ಯಲ್ಲಪ್ಪ ಬುಡರಿ (50) ಬಂಧಿತರು.

ಕಿತ್ತೂರು ಕುಲವಳ್ಳಿ ಅರಣ್ಯ ಶಾಖೆಯಲ್ಲಿ ಅರಣ್ಯ ಪ್ರಾಣಿಗಳನ್ನು ಬೇಟೆಯಾಡುವ ಹವ್ಯಾಸ ಹೊಂದಿರುವ ಆರೋಪಿತರ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆಯ ‌ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಬೇಟೆಯಾಡಿದ್ದ ಒಂದು ಮೊಲ, 48 ನಾಡ ಕಚ್ಚಾ ಬಾಂಬುಗಳು,ಎರಡು ಮೊಬೈಲ್ ಹಾಗೂ ಎರಡು ದ್ವಿಚಕ್ರ ವಾಹನ ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ನಾಗರಗಾಳಿ ಎಸಿಎಫ್ ಸಿ.ಜಿ.ಮಿರ್ಜಿ, ಗೋಲಿಹಳ್ಳಿ ಆರ್ ಎಫ್ ಒ ಶ್ರೀನಾಥ್ ಕಡೊಲಕರ, ಉಪವಲಯ ಅರಣ್ಯಾಧಿಕಾರಿ ಸಿದ್ದಲಿಂಗಲೇಶ್ವರ ಮಗದುಮ ಸಿಬ್ಬಂಧಿಗಳಾದ ಗಿರೀಶ್ ಮೆಕ್ಕೆದ,‌ ಅಜಿಜ್ ಮುಲ್ಲಾ, ಪ್ರವೀಣ ದೂಳೆಪ್ಪಗೊಳ, ಮೊಹಿದ್ದಿನ ತಹಶಿಲ್ದಾರರ ‌ಸೇರಿದಂತೆ ಮೊದಲಾವರು ಭಾಗವಹಿಸಿದ್ದರು.