SHARE

ಬೆಳಗಾವಿ: ಜಿಲ್ಲೆಯಲ್ಲಿ ಈವರೆಗೆ ಒಟ್ಟು 233 ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆಯಾಗಿವೆ. ಇದರಲ್ಲಿ 33 ಜನರು ಸಾವನ್ನಪ್ಪಿದ್ದಾರೆ ಎಂದು ಬಿಮ್ಸ ನಿರ್ದೇಶಕ ಡಾ.ಉಮೇಶ ಕುಲಕರ್ಣಿ ಅವರು ತಿಳಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ.ಉಮೇಶ ಕುಲಕರ್ಣಿ ಸಧ್ಯಕ್ಕೆ ಬಿಮ್ಸನಲ್ಲಿ 67 ಬ್ಲ್ಯಾಕ್ ಫಂಗಸ್ ರೋಗಿಗಳು ವಾರ್ಡನಲ್ಲಿ ದಾಖಲಾಗಿದ್ದಾರೆ. ಈವರೆಗೆ 172 ರೋಗಿಗಳಿಗೆ ಯಶಸ್ವಿಯಾಗಿ ಸರ್ಜರಿ ಮಾಡಿದ್ದೇವೆ. ಅದೇ ರೀತಿ ಸಧ್ಯ 15 ರೋಗಿಗಳು ಸರ್ಜರಿ ಮಾಡಲು ವೇಟಿಂಗ್‍ಗೆ ಕಾಯುತ್ತಿದ್ದಾರೆ. ಈಗ ದಿನಕ್ಕೆ ಒಂದು ಅಥವಾ ಎರಡು ಕೇಸ್‍ಗಳು ಬರುತ್ತಿವೆ. ಮೊದಲು ಐದರಿಂದ ಏಳು ಕೇಸ್‍ಗಳು ಬರುತ್ತಿದ್ದವು ಎಂದು ಮಾಹಿತಿ ನೀಡಿದರು.ಇನ್ನು ಯಾರಿಗೆ ಬಹಳ ರಿಯಾಕ್ಷನ್ ಆಗುತ್ತದೆಯೋ, ಲಿಕ್ವಿಡ್ ಕಾಂಪ್ಲೇಕ್ಸ್ ಕೊಡಲು ಆಗುವುದೇ ಇಲ್ಲ ಎನ್ನುವಂತವರಿಗೆ ಲೈಪೋಸಂ ಯೂಸ್ ಮಾಡುತ್ತಿದ್ದೇವೆ. ಪೂರಾ ಸಿರಿಯರ್ ಕೇಸ್ ಇತ್ತು, ನ್ಯೂರಾನಲ್-ಬ್ರೇನ್ ಇನ್ವಾಲ್ಮೆಂಟ್ ಇತ್ತು ಎಂದರೆ ಲೈಪೋಸಂ ಯೂಸ್ ಮಾಡುತ್ತಿದ್ದೇವೆ ಎಂದು ಇದೇ ವೇಳೆ ಡಾ.ಉಮೇಶ ಕುಲಕರ್ಣಿ ಸ್ಪಷ್ಟಪಡಿಸಿದರು.

ಇನ್ನು ಎಲ್ಲಾ ವಯಸ್ಸಿನವರಿಗೂ ಬ್ಲ್ಯಾಕ್ ಫಂಗಸ್ ತಗುಲಿದೆ. ಇದರಲ್ಲಿ ವಯಸ್ಸಿನ ಮಿತಿ ಕಂಡು ಬಂದಿಲ್ಲ. ವಯಸ್ಕರಲ್ಲಿಯೂ ಕಾಣಿಸಿಕೊಂಡಿದೆ. ಡೆಲ್ಟಾ ಪ್ಲಸ್ ಸಂಬಂಧ 15 ರಿಪೋರ್ಟಗಳನ್ನು ಬೆಂಗಳೂರಿಗೆ ಕಳಿಸಿದ್ದೇವೆ. ರಿಸಲ್ಟ್‍ಗಾಗಿ ಕಾಯುತ್ತಿದ್ದೇವೆ. ಬಿಮ್ಸನಲ್ಲಿಯೇ ಆಗಸ್ಟ್ 15ವರೆಗೆ ಡೆಲ್ಟಾ ಪ್ಲಸ್ ಟೆಸ್ಟಿಂಗ್ ಆರಂಭವಾಗುವ ಸಾಧ್ಯತೆಯಿದೆ ಎಂದು ಇದೇ ವೇಳೆ ಡಾ.ಉಮೇಶ ಕುಲಕರ್ಣಿ ಅವರು ತಿಳಿಸಿದರು.