SHARE

ಬೆಳಗಾವಿ:ಗಡಿ ನಾಡು ಬೆಳಗಾವಿ ಜಿಲ್ಲೆಗೆ ಹೊರ ರಾಜ್ಯಗಳಿಂದ ಬರುವ ಎಲ್ಲ ಪ್ರಯಾಣಿಕರಿಗೂ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದ್ದು, ರಾಜ್ಯ ಪ್ರವೇಶಿಸುವ ಎಲ್ಲ ಪ್ರಯಾಣಿಕರ ತಪಾಸಣೆ ನಡೆಸಲಾಗುತ್ತಿದೆ. ಇದಕ್ಕಾಗಿ ರೈಲ್ವೆ ಸ್ಟೇಶನ್, ಬಸ್ ನಿಲ್ದಾಣ, ಬಾಚಿ, ಕಾಕತಿಯಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಿ ನೆಗೆಟಿವ್ ಇದ್ದವರಿಗೆ ಮಾತ್ರ ಪ್ರವೇಶ ಕಲ್ಪಿಸುತ್ತಿದ್ದಾರೆ. ಕಟ್ಟು ನಿಟ್ಟಿನ ನಿಗಾ ವಹಿಸಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಿ ನೆಗೆಟಿವ್ ಇದ್ದವರಿಗೆ ಮಾತ್ರ ಪ್ರವೇಶ ಕಲ್ಪಿಸುತ್ತಿದ್ದಾರೆ. ಆರ್‍ಟಿಪಿಸಿಆರ್ ವರದಿ ಇಲ್ಲದವರನ್ನು ಪರೀಕ್ಷೆಗೆ ಒಳಪಡಿಸಿ ಸೋಂಕು ಕಂಡು ಬಂದರೆ ಬಿಮ್ಸ್‍ಗೆ ದಾಖಲಿಸುತ್ತಿದ್ದಾರೆ. ಬುಧವಾರ ಬಸ್ ನಿಲ್ದಾಣದಲ್ಲಿ ಇಬ್ಬರಿಗೆ ಪಾಸಿಟಿವ್ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ತಪಾಸಣೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.RTPCR Test Mandatory to Enter Belagavi Districtಈ ವೇಳೆ ಡಿಸಿಪಿ ಸಿ.ಆರ್. ನೀಲಗಾರ ಮಾತನಾಡಿ, ರಾಜ್ಯದ ಗಡಿಯಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಇದಕ್ಕಾಗಿ ರೈಲ್ವೆ ಸ್ಟೇಶನ್, ಬಸ್ ನಿಲ್ದಾಣ, ಬಾಚಿ, ಕಾಕತಿಯಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಮಹಾರಾಷ್ಟ, ಗೋವಾದಿಂದ ಬರುವ ಎಲ್ಲ ಪ್ರಯಾಣಿಕರಿಗೆ ಪರೀಕ್ಷೆ ಮಾಡುತ್ತಿದ್ದೇವೆ. ಪಾಸಿಟಿವ್ ಬಂದರೆ ಬಿಮ್ಸ್‍ಗೆ ದಾಖಲು ಮಾಡುತ್ತಿದ್ದೇವೆ. ರಾಜ್ಯಕ್ಕೆ ಬರುವವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಂಡು ಆರ್‍ಟಿಪಿಸಿಆರ್ ವರದಿ ತರಬೇಕು. ಒಂದು ವೇಳೆ ಅಲ್ಲಿ ಪರೀಕ್ಷೆ ಮಾಡಿಸದಿದ್ದರೆ ಇಲ್ಲಿ ಪರೀಕ್ಷೆ ಮಾಡುವುದು ಖಚಿತ. ಕೋವಿಡ್ ಸೋಂಕು ತಡೆಯಲು ಎಲ್ಲ ಕ್ರಮ ಕೈಗೊಳ್ಳುತ್ತಿದ್ದೇವೆ. ಪ್ರಯಾಣಿಕರು ವರದಿ ತರದಿದ್ದರೆ ಬಿಮ್ಸ್‍ಗೆ ದಾಖಲಿಸುವುದು ಖಚಿತ ಎಂದು ಎಚ್ಚರಿಸಿದರು.

ಈ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿಮಾ ಹಿಕ್ಕಡಿ ಮಾತನಾಡಿ, ಗೋವಾ ಮತ್ತು ಮಹಾರಾಷ್ಟ್ರದಿಂದ ಬರುವ ಎಲ್ಲ ಪ್ರಯಾಣಿಕರನ್ನು ಪರೀಕ್ಷಿಸುತ್ತಿದ್ದೇವೆ. ಬೆಳಗ್ಗೆ 8ರಿಂದಲೇ ಪರೀಕ್ಷೆ ಮಾಡುತ್ತಿದ್ದು, 11 ಗಂಟೆಯವರೆಗೆ 15 ಜನರನ್ನು ಪರೀಕ್ಷೆ ಮಾಡಿದ್ದೇವೆ. ಇಂದು ಯಾರೂ ಪಾಸಿಟಿವ್ ಕಂಡು ಬಂದಿಲ್ಲ. ನಿನ್ನೆ ಎರಡು ಪಾಸಿಟಿವ್ ಕೇಸ್‍ಗಳು ಕಂಡು ಬಂದಿದ್ದವು. ಆರೋಗ್ಯ ಸಿಬ್ಬಂದಿ, ಸಾರಿಗೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಎಲ್ಲರೂ ಇಲ್ಲಿದ್ದು, ಶಿಫ್ಟ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪಾಸಿಟಿವ್ ಬಂದವರನ್ನು ಬಿಮ್ಸ್‍ಗೆ ದಾಖಲಿಸಲಾಗಿದೆ ಎಂದರು.