SHARE

ಬೆಳಗಾವಿ: ನಮ್ಮ ಕಾಂಗ್ರೆಸ್ ಪಕ್ಷ ಬಸವಾದಿ ತತ್ವದ ಮೇಲೆ ನಡೆಯುತ್ತಿದೆ.‌ ಉತ್ತರ ಕರ್ನಾಟಕ ಭಾಗದಲ್ಲಿ ಮುಂಬರುವ ಚುನಾವಣೆಯಲ್ಲಿ ಲಿಂಗಾಯತ ಸಮಾಜವೂ ಕಾಂಗ್ರೆಸ್ ಪಕ್ಷದ ಜೊತೆ ತರುವ ಪ್ರಯತ್ನ ಮಾಡುತ್ತೇವೆ ಎಂದು ಕಾಂಗ್ರೆಸ್ ಬೆಂಬಲಿಸಿದ ಲಿಂಗಾಯತ ನಾಯಕರು ಬಿಜೆಪಿ ಸೇರಿದ್ದಾರೆ ಎಂಬುವುದರ ಕುರಿತು ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದರು.‌ ಬೆಳಗಾವಿಯ ನಾಗನೂರುಮಠದಲ್ಲಿ ಎಂ.ಬಿ ಪಾಟೀಲ್ ಅವರನ್ನು ಬೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಮೊದಲು ಚುನಾವಣೆ ನಡೆಯಲಿ, ಪಕ್ಷಕ್ಕೆ ಸ್ಪಷ್ಟವಾಗಿ ಬಹುಮತ ಸಿಗಬೇಕು. ನಂತರ ಸಿಎಂ ಚರ್ಚೆ ಆಗುತ್ತೆ ಆ ವೇಳೆ ಹೈಕಮಾಂಡ್ ನಿರ್ಣಾಯಕ್ಕೆ ನಾವು ಬದ್ದವಾಗಿರ್ತೇವೆ ಎಂದು ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ಚರ್ಚೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.

ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಎಲ್ಲಾ ಸಮಾಜದವರಿಗೂ ಮಾನ್ಯತೆ ನೀಡುತ್ತದೆ. ಲಿಂಗಾಯತ ಸಮಾಜದ ಪ್ರಮುಖರನ್ನು ಗುರುತಿಸುವ ಕೆಲಸ ಕಾಂಗ್ರೆಸ್ ಮಾಡುತ್ತಾ ಬಂದಿದೆ.‌ ನಾನು, ಎಂ ಬಿ ಪಾಟೀಲ್, ಈಶ್ವರ ಖಂಡ್ರೆ, ಸೇರಿದಂತೆ ನಮ್ಮ ಸಮಾಜದ ಪ್ರಮುಖರನ್ನ ಗುರುತಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ಅವರು ತಿಳಿಸಿದರು. ‌