SHARE

ಬೆಳಗಾವಿ: ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಾವು ಪ್ರಾರಂಭ ಮಾಡಿದ್ದಲ್ಲ, ಅದು 12 ಶತಮಾನದಲೇ ಪ್ರಾರಂಭ ಆಗಿದೆ. ಇಲ್ಲಿ ನಾವು ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಚರ್ಚೆ ಮಾಡೋಕೆ ಬಂದಿಲ್ಲ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

ಬೆಳಗಾವಿಯ ನಾಗನೂರು ರುದ್ರಾಕ್ಷಿಮಠಕ್ಕೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶ್ರೀಗಳ ಭೇಟಿಗೆ ಬಂದಿದ್ದೇನೆ. ಅಪ್ಪುಗೋಳ ವಿಶೇಷ ಆಶೀರ್ವಾದ ನಮ್ಮ ಮೇಲೆ ಇದೆ. ಫ ಗು ಹಳಕಟ್ಟಿ  ಅವರ ಶಿವನುಭವ ಪತ್ರಿಕೆ ಸಂಗ್ರಹ ನಡೀತಿದೆ. ಅದರಲ್ಲಿ ನಾಗನೂರು ಮಠದ ಪಾತ್ರ ಬಹಳಷ್ಟಿದೆ. ಶಿವಾನುಭವ ಪತ್ರಿಕೆಯ, ಸಂಗ್ರಹ ಮಾಡುವ ಬಗೆಗೆ ಈಗಾಗಲೇ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. ಜೊತೆಗೆ ಬಸವಣ್ಣವರ ಮತ್ತು ಬಸವಾದಿ ಶರಣರ ಕೃತಿಗಳನ್ನು ಸಂಗ್ರಹ ಮಾಡಿ ಗ್ರಂಥಾಲಯ ತೆರೆಯುವ ಕುರಿತು ಚರ್ಚೆ ನಡೆಸಲಾಗಿದೆ. ಗ್ರಂಥಾಲಯ ವಿಜಯಪುರ ಅಥವಾ ಬೆಂಗಳೂರಲ್ಲಿ ತೆರೆಯುವ ಕುರಿತು ಚರ್ಚೆ ಮಾಡಲಿದ್ದೇನೆ ಎಂದು ತಿಳಿಸಿದರು. ‌‌

ಯಡಿಯೂರಪ್ಪ ನಂತರ ಲಿಂಗಾಯತ ಸಮಾಜದ ಪ್ರಮುಖ ನಾಯಕ ಎಂ ಬಿ ಪಾಟೀಲ ಎಂಬ ವಿಚಾರಬಾಗಿ ಮಾತನಾಡಿದ ಅವರು, ಅದನ್ನ ನಾನೇ ಹೇಳ್ಕೊಳೋಕೆ ಆಗುತ್ತಾ, ಜನ ಮಾತಾಡಬೇಕು. ಜನ ಹೇಳಿದಾಗ ನಾನು ಧ್ವನಿ ಆಗುತ್ತೇನೆ. ಅದನ್ನೆಲ್ಲ ಜನ ಹೇಳಬೇಕು ಎಂದು ತಿಳಿಸಿದರು. ಉತ್ತರ ಕರ್ನಾಟಕ ಭಾಗದ ಲಿಂಗಾಯತರು ಬಿಜೆಪಿ ಕಡೆ ವಾಲಿರುವ ಕುರಿತು ಮಾತನಾಡಿದ ಅವರು, ಹೈಕಮಾಂಡ್ ಜತೆ ಚರ್ಚೆ ಮಾಡಿ ಲಿಂಗಾಯತರಿಗೆ ಸೂಕ್ತ ಸ್ಥಾನಮಾನ ನೀಡಿ ಕಾಂಗ್ರೆಸ್ ಗೆ ಸೇರಿಸುತ್ತೇವೆ. ಲಿಂಗಾಯತ ಸಮುದಾಯದಲ್ಲಿ ಯಡಿಯೂರಪ್ಪ ಎತ್ತರದ ನಾಯಕ, ಮುಖ್ಯಮಂತ್ರಿ ಆಗಿದ್ದಾರೆ, ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಕಾಶ್ ಹುಕ್ಕೇರಿ, ಎ. ಬಿ. ಪಾಟೀಲ ಅವರು ಲಿಂಗಾಯತ ಸಮಾಜದ  ಹಿರಿಯ ನಾಯಕರು.

ಕಾಂಗ್ರೆಸ್ ನಲ್ಲಿ ಸಿಎಂ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ಮೊದಲು ಪಕ್ಷಕ್ಕೆ ಸ್ಪಷ್ಟ ಬಹುಮತ ಬರಬೇಕು. ಜನದೇಶ ಸಿಕ್ಕಮೇಲೆ ಸಿಎಂ ಚರ್ಚೆ ನಡೆತಬೇಕು.‌ನಮಗೆ ನಾವೇ ಸ್ವಯಂ ಘೋಷಿತ ಸಿಎಂ ಎಂದರೆ ಸಿಎಂ ಆಗೋಲ್ಲ ಎಂದು ತಿಳಿಸಿದರು. ‌