SHARE

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಘೋಷಿಸಿದ್ದಾರೆ. 2 ವರ್ಷದ ಸಾಧನಾ ಸಮಾವೇಶದಲ್ಲಿ ವಿದಾಯ ಭಾಷಣ ಮಾಡಿದ ಯಡಿಯೂರಪ್ಪ ಇಂದು 3 ಗಂಟೆಗೆ ರಾಜಭವನಕ್ಕೆ ತೆರಳಿ ರಾಜಿನಾಮೆ ನೀಡುವುದಾಗಿ ಘೋಷಿಸಿದರು. ತಮ್ಮ ರಾಜಕೀಯ ಇತಿಹಾಸವನ್ನು ಮೆಲುಕು ಹಾಕಿದ ಅವರು ರಾಜಿನಾಮೆ ಪ್ರಕಟಿಸಿದರು. ತಾವು ಶಿಕಾರಿಪುರದ ಪುರಸಭೆ ಅಧ್ಯಕ್ಷನಾದಾಗಿನಿಂದ ಇಲ್ಲಿನವರೆಗಿನ ನಡೆಯನ್ನು ಮೆಲುಕು ಹಾಕುತ್ತ ಕಣ್ಣೀರು ಹಾಕಿದ ಯಡಿಯೂರಪ್ಪ, ಭಾಲನಾತ್ಮಕ ಭಾಷಣ ಮಾಡಿ ಅಂತಿಮವಾಗಿ ರಾಜಿನಾಮೆ ಪ್ರಕಟಿಸಿದರು.