SHARE

ಪ್ರತಿನಿಧಿ:ಬಸವರಾಜ ಹೂನೂರು
ಲಿಂಗಸುಗೂರು: ಕೆಬಿಜೆಎನ್ಎಲ್ ಅಧಿಕಾರಿಗಳ ನಿರ್ಲಕ್ಷದಿಂದ ರಾಂಪುರು ಏತ ನೀರಾವರಿ ಕಾಲುವೆಯ ನೀರು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಾಳಾಪೂರು ಗ್ರಾಮ ಪಂಚಾಯತ ವ್ಯಾಪ್ತಿಯ ಐದನಾಳ ಗ್ರಾಮಕ್ಕೆ ನುಗ್ಗಿದೆ. ರಾಂಪುರು ಏತ ನೀರಾವರಿಯ ಕಾಲುವೆ ಚಿಕ್ಕಾದಾಗಿದ್ದು ಕಾಲುವೆ ತುಂಬಾ ಜಾಲಿ ಬೆಳೆದಿದ್ದು ಹಾಗೂ ಮಣ್ಣು ಕೂಡ ತುಂಬಿದೆ ಅನೇಕ ಬಾರಿ ಕೆಬಿಜೆಎನ್ ಎಲ್ ಅಧಿಕಾರಿಗಳಿಗೆ ಜಂಗಲ್ ಕಟಿಂಗ್ ಹಾಗೂ ಮಣ್ಣು ತಗೆಯುವಂತ್ತೆ ಈ ಭಾಗದ ರೈತರು ಮನವಿ ಮಾಡಿದರು ಯಾವುದೆ ಪ್ರಯೋಜನವಾಗಿಲ್ಲ ಎಂಬ ಆರೋಪದ ಮಾತು ಕೇಳಿ ಬರುತ್ತಿದ್ದೆ.ಅಧಿಕಾರಿಗಳು ಈಗ ರಾಂಪುರು ಏತ ನೀರಾವರಿಯ ಕಾಲುವೆ ಸರಿಯಾಗಿ ನಿರ್ವಹಣೆ ಮಾಡದ ಹಿನ್ನಲೆಯಲ್ಲಿ ಕಾಳಾಪುರು ಗ್ರಾಮ ಪಂಚಾಯತ ವ್ಯಾಪ್ತಿಯ ಐದನಾಳ ಗ್ರಾಮಕ್ಕೆ ನೀರು ನುಗ್ಗಿದೆ. ನೀರು ಗ್ರಾಮಕ್ಕೆ ನುಗಿದ್ದರಿಂದ ರಸ್ತೆ ಮೇಲೆ ಹರಿಯುತ್ತಿರುವುದರಿಂದ ಗ್ರಾಮಸ್ಥರಿಗೆ ಸಂಚಾರ ಮಾಡಲು ಕೂಡ ತುಂಬಾ ತೊಂದರೆಯಾಗಿದೆ, ರಾಂಪುರು ಏತ ನೀರಾವರಿಯ ನೀರು ಪೋಲಾಗಲು ಕಾಣೀಭೂತರಾದ ಸಂಭಂದಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳಬೇಕು ಎಂದು ಒತ್ತಾಯ ಕೇಳಿ ಬರುತ್ತಿದೆ.