SHARE

ಧಾರವಾಡ: ರಾಜ್ಯಕ್ಕೆ ಉತ್ತಮ ಆಡಳಿತಗಾರ ಸಿಕ್ಕಿದ್ದಾರೆ. ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಪಾರ ಅನುಭವ ಹೊಂದಿರುವ ಮೇಧಾವಿ ರಾಜಕಾರಣಿ, ರಾಜ್ಯಕ್ಕೆ ಉತ್ತಮ ಆಡಳಿತವನ್ನು ಮುಂದಿನ ದಿನಗಳಲ್ಲಿ ಬೊಮ್ಮಾಯಿಯವರು ನೀಡಲಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಹಾಡಿ ಹೊಗಳಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಅವರೊಬ್ಬ ಉತ್ತಮ ಆಡಳಿತಗಾರರು. ಹೆಚ್ಚು ಪುಸ್ತಕಗಳನ್ನು ಓದಿರುವವರ ಲಿಸ್ಟ್‌ನಲ್ಲಿ ಬೊಮ್ಮಾಯಿ ಕೂಡ ಒಬ್ಬರು. ಅವರೊಬ್ಬ ಮೇಧಾವಿ ರಾಜಕಾರಣಿ, ಆಡಳಿತ ಹಾಗೂ ರಾಜಕೀಯ ಅನುಭವ ಅವರಿಗೆ ಸಾಕಷ್ಟಿದೆ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಅವರಿಂದ ಹೆಚ್ಚಿನ ಅಭಿವೃದ್ಧಿ ಕೆಲಸಗಳಾಗಲಿವೆ ಎಂದರು.

ನಿಮಗೆ ಸಿಎಂ ಸ್ಥಾನವೂ ಸಿಗಲಿಲ್ಲ, ಸಚಿವ ಸ್ಥಾನವೂ ಸಿಗಲಿಲ್ಲವಲ್ಲ ಎಂಬ ಪ್ರಶ್ನೆಗೆ ರಾಜಕೀಯದ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ, ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ಧಾರವಾಡಕ್ಕೆ ಬರುವ ದಿನ ನಾನು ಅವರೊಂದಿಗೆ ಮಾತನಾಡಿದ್ದೆ. ನಾನು ಊರಲ್ಲಿ ಇರಲಿಲ್ಲ. ಬಂದ ನಂತರ ಭೇಟಿ ಮಾಡುವುದಾಗಿ ಹೇಳಿದ್ದೇನೆ ಎಂದರು. ಬ್ಯಾನರ್‌ನಲ್ಲಿ ನನ್ನ ಫೋಟೋ ಹಾಕಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ಹರಿದು ಹಾಕುವುದು ತಪ್ಪು, ಬ್ಯಾನರ್ ಹಾಕುವವರಿಗೂ ಗಮನ ಇರುವುದಿಲ್ಲ, ಒಮ್ಮೊಮ್ಮೆ ಆ ರೀತಿ ತಪ್ಪುಗಳಾಗುತ್ತಿರುತ್ತವೆ. ಆ ರೀತಿ ಬ್ಯಾನರ್ ಹರಿದ ಹಾಕುವುದು ತಪ್ಪು ಎಂದು ಬ್ಯಾನರ್ ಹರಿದು ಹಾಕಿದ ಕುರಿತು ಪ್ರತಿಕ್ರಿಯಿಸಿದರು.