SHARE

ಬೆಳಗಾವಿ: ಬೆಳಗಾವಿ ಪಾಲಿಕೆಗೆ ಚುನಾವಣೆ ಯಾವಾಗ ನಡೆದೀತು ಎಂದು ಎಲ್ಲರೂ ನಿರೀಕ್ಷೆಯಲ್ಲಿದ್ದುದು ನಿಜವಾದರೂ, ಇಷ್ಟು ದಿಢೀರ್ ಆಗಿ ಚುನಾವಣೆ ಘೋಷಣೆಯಾಗಿರುವುದು ಶಾಕ್ ನೀಡಿದೆ. ಕೇವಲ 4 ದಿನ ಅವಕಾಶ ನೀಡಿ ನಾಮಪತ್ರ ಸಲ್ಲಿಕೆ ಆರಂಭದ ದಿನ ಘೋಷಿಸಲಾಗಿದೆ. ಆ.16ರಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಆ.23 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ. ಸೆ.3ರಂದು ಮತದಾನ ನಡೆಯಲಿದೆ. ಸೆ.6ಕ್ಕೆ ಫಲಿತಾಂಶ ಪ್ರಕಟವಾಗಲಿದೆ.