SHARE

ಪ್ರತಿನಿಧಿ:ಬಸವರಾಜ ಹೂನೂರು
ಲಿಂಗಸುಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆಸರೆ ಆಸ್ಪತ್ರೆ ಖ್ಯಾತ ವೈದ್ಯರಾದ ಡಾ :ರಂಗನಾಥ ಮತ್ತು ಭೀಮಾ ಶಂಕರ ರವರು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷದ ಬೆಂಗಳೂರಿನ ಮಾಜಿ ಪ್ರಧಾನಿಗಳ ನಿವಾಸದಲ್ಲಿ ಸೇರಿದರು. ಇದೆ ವೇಳೆ ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡ ರವರು ಪಕ್ಷದ ಶಾಲ್ ಹಾಕಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.

ಮುಂದಿನ ಗೆಜ್ಜಲಗಟ್ಟಾ ಜಿಲ್ಲಾ ಪಂಚಾಯತ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಿದರು. ಇದೆ ಸಂದರ್ಭದಲ್ಲಿ ಲಿಂಗಸುಗೂರು ತಾಲೂಕಿನ ಜೆಡಿಎಸ್ ಪಕ್ಷದ ಪರಾಜಿತ ಅಭ್ಯರ್ಥಿ ಸಿದ್ದು ಬಂಡಿ ತಾಲೂಕಾಧ್ಯಕ್ಷ ಕೆ,ನಾಗಭೂಷಣ, ಹಾಗೂ ಅಲ್ಪಸಂಖ್ಯಾತ ಘಟಕದ ತಾಲೂಕಾಧ್ಯಕ್ಷ ಜೆ ಬಾಬು ಹಟ್ಟಿ ಸಂಗನಗೌಡ ಪಾಟೀಲ್ ಭೋಗಾಪುರು,ರಾಮಚಂದ್ರ ಉಪಸ್ಥಿತರಿದ್ದರು.