SHARE

ಬೆಳಗಾವಿ:ನಾನು ಸಚಿವನಾಗಿ ಕೆಲಸ ಮಾಡಿದ್ದೇನೆ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಆಸೆ ಪಟ್ಟಿಲ್ಲ.ಕೊಟ್ಟರೂ ನಾನು ತೆಗೆದುಕೊಳ್ಳೊದಿಲ್ಲ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ‌ ಪಕ್ಷದಿಂದ ನನಗೆ ಯಾವುದೇ ರೀತಿಯಲ್ಲಿ ಅನ್ಯಾಯ ಆಗೊದಿಲ್ಲ ಎಂಬ ಪೂರ್ಣ ಭರವಸೆ ನನಗಿದೆ.ಪಕ್ಷದ ಮುಖಂಡ ಏನು ಜವಾಬ್ದಾರಿ ಕೊಡುತ್ತಾರೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ನನಗೆ ಸಚಿವ ಸ್ಥಾನ ಕೊಡದಿರುವುದಕ್ಕೆ ನನಗೇನು ಬೇಜಾರಿಲ್ಲ.

ನಮ್ಮನ್ನ ಯಾವುದೇ ರೀತಿಯಲ್ಲಿ ನಮ್ಮನ್ನ ಕೈ ಬಿಡೋದಿಲ್ಲ ಎನ್ನವ ಭರವಸೆ ನಮಗೆ ಇದೆ. ಆದ್ರೆ,ಮುಂಬರುವ ದಿನಗಳಲ್ಲಿ ಮತ್ತೊಂದು ರೀತಿಯ ದೊಡ್ಡ ಜವಾಬ್ದಾರಿ ಕೊಡಬಹುದು. ಈಗಾಗಲೇ ಸಿಎಂ ಅವರನ್ನು ಭೇಟಿಯಾಗಿ ನನಗೂ ಅವಕಾಶ ಕೊಡಿ ಅಂತಾ ಮನವಿ ಮಾಡಿಕೊಂಡಿದ್ದೇವೆ. ಸಿಎಂ ಏನು ಕೊಡುತ್ತಾರೆ.ಅದನ್ನು ನಿಭಾಯಿಸುತ್ತೇನೆ‌ ಎಂದರು. ಬೇರೆ ಜವಾಬ್ದಾರಿ ಕೊಡುವ ಸಲುವಾಗಿ ಸಂಪುಟದಿಂದ ನನ್ನನ್ನು ಕೈಬಿಟ್ಟಿರಬಹದು. ಮರಾಠಾ ಸಮುದಾಯದವರು ನಮ್ಮ ಸಮುದಾಯಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಬೇಜಾರು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಮುಂದೊಂದು ದಿನ ನಮ್ಮ ಸಮುದಾಯಕ್ಕೆ ಒಳ್ಳೆಯ ಸ್ಥಾನಮಾನ ಕೊಡುವ ವಿಶ್ವಾಸವಿದೆ.ಪಕ್ಷದ ಮುಖಂಡರು ನನಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಸಚಿವ ಸ್ಥಾನ ನಿಭಾಯಿಸಿದ ನನಗೆ ನಿಗಮದ ಮಂಡಳಿ ಸ್ಥಾನ ಬೇಡವೇ ಬೇಡ. ಪಕ್ಷದ ವರಿಷ್ಠರು ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಕೊಡುವ ವಿಶ್ವಾಸ ಇದೆ. ಇನ್ನೂ ಸಾಕಷ್ಟು ಸಮಯ ಇದೆ. ಜವಾಬ್ದಾರಿ ಕೊಟ್ಟೆ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾನು ಸಚಿವನಾಗಿ ಸಾಕಷ್ಟು ಕೆಲಸಗಳನ್ನ ಮಾಡಿದ್ದೇನೆ ಇದರಿಂದ ನಮ್ಮ ಸಮುದಾಯದವರು ಯಾವುದೇ ರೀತಿಯಲ್ಲಿ ಅಸಮಾಧಾನ ಮಾಡಿಕೊಳ್ಳುವ ಉದ್ದೇಶ ಇಲ್ಲವೆ ಇಲ್ಲ ಎಂದು ತಿಳಿಸಿದರು.