SHARE

ಅಕ್ರಮ ಗಾಂಜಾ ಬೆಳೆ ಜಪ್ತಿ ಒರ್ವನ ಬಂಧನ

ತೇರದಾಳ:
ಪೊಲೀಸ್ ಠಾಣಾ ವ್ಯಾಪ್ತಿಯ ತೇರದಾಳ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ 13 ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡಿರುವ ತೇರದಾಳ ಪೊಲೀಸರು ಜಮೀನಿನ ಸಾಗುವಆದಾರನೊಬ್ಬನನ್ನು ಬಂಧಿಸಿರುತ್ತಾರೆ.

ಶ್ರೀ ಲೋಕೇಶ ಭ ಜಗಲಾಸರ್, ಐಪಿಎಸ್. ಪೊಲೀಸ್ ಅಧೀಕ್ಷಕರು ಬಾಗಲಕೋಟೆ ಹಾಗೂ ಶ್ರೀ ಎಂ ಪಾಂಡುರಂಗಯ್ಯ, ಪೊಲೀಸ್ ಉಪಾಧೀಕ್ಷಕರು ಜಮಖಂಡಿ ರವರ ಮಾರ್ಗದರ್ಶನದಲ್ಲಿ ರಬಕವಿ ಬನಹಟ್ಟಿ ತಹಶೀಲ್ದಾರರಾದ ಶ್ರೀ ಸಂಜಯ ಬಿ ಇಂಗಳೆ ಇವರ ಸಮಕ್ಷಮದಲ್ಲಿ ಮಾಹಿತಿ ಆಧರಿಸಿ ದಾಳ ನಡೆಸಿದ ಶ್ರೀ ರಾಜು ವೈ ಬೀಳಗಿ, ಪಿಎಸ್‌ಐ ತೇರದಾಳ ಠಾಣೆರವರು ತಮ್ಮ ಸಿಬ್ಬಂದಿಯೊಂದಿಗೆ ತೇರದಾಳ ವ್ಯಾಪ್ತಿಯ ಜಮೀನೊಂದರಲ್ಲಿ ಬೆಳೆದಿದ್ದ 13 ಗಾಂಜಾಗಿಡಗಳು, ಒಟ್ಟು ತೊಕ 7 ಕೆ ಜಿ 490 ಗ್ರಾಂದಷ್ಟು ಅಂದಾಜು ಬೆಲೆ 37,450/- ರೂಗಳು ನೇದ್ದವುಗಳನ್ನು ಜಪ್ತಿ ಮಾಡಿಕೊಂಡಿರುತ್ತಾರೆ.

ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶ್ರೀ ಜೆ ಕರುಣೇಶಗೌಡ, ವೃತ್ತ ನಿರೀಕ್ಷಕರು ರಬಕವಿ-ಬನಹಟ್ಟಿ ರವರು ಪ್ರಕರಣದ ತನಿಖೆ ಕೈಗೊಂಡು ಗಾಂಜಾ ಗಿಡಗಳನ್ನು ತನ್ನ ಕಣ್ಣಿನ ಬೆಳೆ ಇರುವ ಜಮೀನಿನಲ್ಲಿ ಬೆಳೆದಿದ್ದ ವ್ಯಕ್ತಿಗೆ ಬಂಧಿಸಿದ್ದಾರೆ. ಈ ಯಶಸ್ವೀ ಕಾರ್ಯಾಚರಣೆಯಲ್ಲಿ ತೇರದಾಳ ಠಾಣೆಯ ಪೊಲೀಸರಾದ ಶ್ರೀ ಕೆ ಹೆಚ್ ಸನ್ನಟ್ಟಿ, ಎಮ್ ಆರ್ ಕೆಂಚನ್ನವರ, ಎ ಬಿ ಸವದಿ, ಎಮ್ ಎಮ್ ಎತ್ತಿನಮನಿ, ಎಸ್ ಎಸ್ ಜಕಾತಿ, ಎಸ್ ಐ ಸೋನಾವನೆ, ಎಮ್ ಆರ್ ಗುರವ, ಭಾಗವಹಿಸಿದ್ದರು. ಪೊಲೀಸರ ಈ ಕಾರ್ಯಕ್ಕೆ ಶ್ರೀ ಲೋಕೇಶ ಭ ಜಗಲಾಸರ್, ಐಪಿಎಸ್, ಪೊಲೀಸ್ ಅಧೀಕ್ಷಕರು ಬಾಗಲಕೋಟೆ ಜಿಲ್ಲೆ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.