SHARE

ಎಂ.ಕೆ.ಹುಬ್ಬಳ್ಳಿ: ಕಾಲುಜಾರಿ ಕೆರೆಯಲ್ಲಿ ಬಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ಭಾನುವಾರ ಮುಂಜಾನೆ ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಯಲ್ಲಿ ನಡೆದಿದೆ. ಗೋಕಾಕ ತಾಲೂಕಿನ ಕೊನ್ನೂರ ಗ್ರಾಮದ ಕಾಂತೇಶ ಭೀಮಪ್ಪ ಬಡಿಗೇರ(25) ಮೃತದೇಹ ಹೊರತೆಗಿದ್ದು, ಇತನ ಜೊತೆಗಿದ್ದ ಎನ್ನಲಾದ ಸ್ಥಳೀಯ ಬಾಲಕನೊಬ್ಬನ ಮೃತ ದೇಹಕ್ಕಾಗಿ ಶೋಧಕಾರ್ಯ ಮುಂದುವರರೆಸಿ ಇಬ್ಬರ ಮೃತದೇಹವನ್ನು ಹೊರ ತೆಗೆಯಲಾಗಿದೆ.

ಕೆರೆಯಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಮತ್ತೊಂದು ದಡದಲ್ಲಿದ್ದ ರೈತ ಮುಗುಟಸಾಬ ಜಾಮಿಂದಾರ ಓಡೋಡಿ ಬಂದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಇಬ್ಬರು ನೀರಿನಲ್ಲಿ ಮುಳುಗಿದ್ರು ಎನ್ನಲಾಗಿದೆ. ತಕ್ಷಣ ಎಲ್ಲರಿಗೂ ರೈತ ಮಾಹಿತಿ‌ ಮುಟ್ಟಿಸಿದ್ದಾನೆ. ಸ್ಥಳಕ್ಕೆ ಕಿತ್ತೂರು ಪೊಲೀಸ್ ಠಾಣೆ ಪಿಎಸ್ ಐ ದೇವರಾಜ ಉಳ್ಳೇಗಡ್ಡಿ, ಅಗ್ನಿಶಾಮಕ ಧಳ ಸಿಬ್ಬಂದಿ ಭೇಟಿನೀಡಿದ್ದಾರೆ. ಕಾಂತೇಶ ಮೃತದೇಹವನ್ನ ಸ್ಥಳೀಯ ಇಜುಗಾರ ಯುವಕರು ಹೊರತೆಗೆದಿದ್ದಾರೆ. ಕೊನ್ನೂರಿನ ಕಾಂತೇಶ ನಿನ್ನೆ ಸಂಜೆ ತಮ್ಮ ಬಂದುಗಳ ಮನೆ ಎಂ.ಕೆ‌.ಹುಬ್ಬಳ್ಳಿ ಗೆ ಬಂದಿದ್ದರೂ ಎನ್ನಲಾಗಿದೆ.